ಕಾಂಗ್ರೆಸ್ ಕುಟುಂಬ ಕಲ್ಯಾಣ: ವಿಧಾನ ಪರಿಷತ್ ಚುನಾವಣೆ, ಸಂಬಂಧಿಗಳಿಗೆ ಮಣೆ

Congress
Published on

ಬೆಂಗಳೂರು: ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್​ನ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. ವಿಧಾನ ಪರಿಷತ್​ನ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರಿಗೆ ಟಿಕೆಟ್ ಕೈ ತಪ್ಪಿದೆ. 17 ಅಭ್ಯರ್ಥಿಗಳ ಪಟ್ಟಿ ಸಂಜೆ ಬಿಡುಗಡೆ ಯಾದರೆ ಬೀದರ್, ಬೆಂಗಳೂರು ನಗರ ಹಾಗೂ ಕೋಲಾರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ತಡರಾತ್ರಿ ಅಂತಿಮಗೊಳಿಸಲಾಯಿತು.

ಹಾಲಿ ಸದಸ್ಯರ ಪೈಕಿ ನಾಲ್ವರಿಗಷ್ಟೇ ಮತ್ತೆ ಅವಕಾಶ ಸಿಕ್ಕಿದೆ. ಶಿವಮೊಗ್ಗದಿಂದ ಪ್ರಸನ್ನಕುಮಾರ್, ಬೆಂಗಳೂರು ಗ್ರಾಮಾಂತರಿಂದ ಎಸ್. ರವಿ, ವಿಜಯದಿಂದ ಸುನಿಲ್​ಗೌಡ ಪಾಟೀಲ್ ಹಾಗೂ ಬಳ್ಳಾರಿಯಿಂದ ಕೆ.ಸಿ. ಕೊಂಡಯ್ಯ ಮತ್ತೆ ಅವಕಾಶ ಪಡೆದಿದ್ದಾರೆ. ಆದರೆ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರಿಗೆ ಟಿಕೆಟ್ ಸಿಕ್ಕಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಅವರ ಬದಲಿಗೆ ಮಾಜಿ ಸಚಿವ ಎಂಬಿ ಪಾಟೀಲ್ ಸೋದರ ಸುನೀಲ್​ಗೌಡ ಪಾಟೀಲ್​ಗೆ ಮಣೆ ಹಾಕಲಾಗಿದೆ.

ಲಖನ್ ಬಂಡಾಯ: ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಬೆಳವಣಿಗೆ ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ತಲೆನೋವು ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net