

ಚೆನ್ನೈ: ತಮಿಳುನಾಡಿನ ಪೂನಮಲ್ಲಿ, ಶೋಲಿಂಗನಲ್ಲೂರು, ತಿರುಪೋರೂರು, ವಂಡಲೂರು ಮತ್ತು ತಾಂಬರಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 2-3 ದಿನಗಳ ಕಾಲ ನಗರದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ವರದಿಯಾಗಿದೆ (IMD Report).
ಇದನ್ನೂ ಓದಿ: ರಾಮನಗರದಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿ
ಐಎಂಡಿ ನೀಡಿರುವ ಹೊಸ ವರದಿಯ ಪ್ರಕಾರ, ಅಕ್ಟೋಬರ್ 18, 20, ಮತ್ತು 21ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಅಕ್ಟೋಬರ್ 22ರವರೆಗೆ ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಮತ್ತು ಅಕ್ಟೋಬರ್ 22 ಮತ್ತು 23ರಂದು ಕೇರಳ ಹಾಗೂ ಮಾಹೆಯಲ್ಲಿ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ.
ಇಂದು ಚೆನ್ನೈಗೆ ಆರೆಂಜ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಅಕ್ಟೋಬರ್ 18ಕ್ಕೆ ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಸೂಚಿಸಿದೆ,(ಏಜೆನ್ಸೀಸ್).