

ಲಂಡನ್: ಯಾವುದೇ ವ್ಯಕ್ತಿ ಆಗಿರಲಿ ತನ್ನಲ್ಲಿರುವ ಅನೇಕ ಗೊಂದಲಗಳಿಗೆ ಪರಿಹಾರ ಹುಡುಕುವ ಪ್ರಯತ್ನದ ಭಾಗವಾಗಿ ಆತ ತಜ್ಞರ ಮೊರೆ ಹೊಗುವುದು ಸಹಜ. ಅದರಂತೆಯೇ ಹೆಸರೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತನ್ನ ಮನಸ್ಸಿನಲ್ಲಾಗುತ್ತಿರುವ ವಿಚಿತ್ರ ಆಸೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞೆಯ ಮೊರೆ ಹೋಗಿದ್ದಾರೆ.
ಕೊಲೀನ್ ನೋಲನ್ ಎಂಬ ತಜ್ಞೆಯ ಮೊರೆ ಹೋಗಿರುವ ವ್ಯಕ್ತಿ “ಡಿಯರ್ ಕೊಲೀನ್” ಎಂಬ ನ್ಯೂಸ್ ಲೆಟರ್ಗೆ ಮೇಲ್ ಮಾಡಿ ತನ್ನ ಸಮಸ್ಯೆಗೆ ಪರಿಹಾರ ಕೇಳಿದ್ದಾರೆ. ಅಂದಹಾಗೆ ಕೋಲಿನ್ ಅವರು ಲವ್, ಸೆಕ್ಸ್ ಮತ್ತು ಸಂಬಂಧಗಳು ಸೇರಿದಂತೆ ಅನೇಕ ಗೊಂದಲಗಳಿಗೆ ಉತ್ತರ ನೀಡುತ್ತಾರೆ.
ವ್ಯಕ್ತಿಯ ವಿಚಿತ್ರ ಆಸೆ ಏನು?
ನಾನು ನಲವತ್ತನೇ ವಯಸ್ಸಿನ ವಿವಾಹಿತ ವ್ಯಕ್ತಿ. ನನಗೆ ನೆನಪಿನ ಶಕ್ತಿ ಬಂದಾಗಲಿಂದಲೂ ನಾನು ನನ್ನ ಬಟ್ಟೆಯ ಕೆಳಗೆ ಮಹಿಳೆಯರ ಬಿಗಿಯುಡುಪುಗಳನ್ನು ಧರಿಸುತ್ತಿದ್ದೇನೆ. ಮೊದಲಿಗಿಂತಲೂ ಇಂದು ಹೆಚ್ಚು ತೊಡಗಿಸಿಕೊಂಡಿದ್ದೇನೆ. ನಾನು ಮಹಿಳೆಯರ ಬಟ್ಟೆಗಳನ್ನು ಖರೀದಿಸಿದ್ದು, ಕ್ರಾಸ್ ಡ್ರೆಸ್ಸಿಂಗ್ಗೆ ಬದಲಾಯಿಸಿಕೊಂಡಿದ್ದೇನೆ.
ಇದೀಗ ಹೊರಗಡೆ ಹೋಗುವಾಗ ಮಹಿಳೆಯರ ರೀತಿ ಉಡುಪು ಧರಿಸಬೇಕೆಂಬ ಬಯಕೆಯಾಗುತ್ತಿದೆ. ಇದು ಏನಾದರೂ ನನ್ನ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ? ಏನಾದರೂ ಸಲಹೆ ನೀಡಿ ಎಂದು ಹೆಸರೇಳಲು ಇಚ್ಛಿಸದ ವ್ಯಕ್ತಿಯೊರ್ವ ಕೊಲೀನ್ ಬಳಿ ಕೇಳಿಕೊಂಡಿದ್ದಾನೆ.
ತಜ್ಞೆ ಕೊಲೀನ್ ಹೇಳಿದ್ದೇನು?
ನಿಮ್ಮ ಹೆಂಡತಿಗೆ ನಿಮ್ಮ ವರ್ತನೆ ಬಗ್ಗೆ ತಿಳಿದಿದ್ದರೆ, ನೀವು ಖಂಡಿತ ನಿಮ್ಮ ಬಯಕೆಯನ್ನು ಹೇಳುವುದಿಲ್ಲ. ಆದರೆ, ಈ ಬಗ್ಗೆ ನಿಮ್ಮ ಪತ್ನಿ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ. ಒಂದು ವೇಳೆ ನಿಮ್ಮ ಪತ್ನಿಗೆ ತಿಳಿದಿಲ್ಲದರೆ, ಚರ್ಚೆ ನಡೆಸುವುದು ತುಂಬಾ ಕಷ್ಟವಾಗುತ್ತದೆ. ನೀವು ಬಯಸಿದಂತೆ ಮುಂದಿನ ಹೆಜ್ಜೆ ಇಡಲು ಹೋಗುವ ಮುನ್ನ ನಿಮ್ಮ ಪತ್ನಿಯೊಂದಿಗೆ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆಂದು ಕೊಲೀನ್ ಹೇಳಿದ್ದಾರೆ.
ಒಂದು ವೇಳೆ ನಿಮ್ಮ ಪತ್ನಿಗೆ ಇಷ್ಟವಿಲ್ಲದಿದ್ದರೆ, ಆಘಾತಕ್ಕೊಳಗಾಗಬಹುದು ಅಥವಾ ಅರ್ಥಮಾಡಿಕೊಳ್ಳದಿರಬಹುದು ಅಥವಾ ಅವಳು ಅರ್ಥಮಾಡಿಕೊಳ್ಳಬಹುದು, ಆದರೆ ಅದರ ಭಾಗವಾಗಲು ಬಯಸುವುದಿಲ್ಲ ಎಂದು ನೀವು ಸಿದ್ಧರಾಗಿರಬೇಕು.
ಮದುವೆಯಾಗಿ 35 ವರ್ಷಗಳಾಗಿರುವ ಒಬ್ಬ ನೇರ ವ್ಯಕ್ತಿ ನನಗೆ ಗೊತ್ತಿದೆ. ಅವನು ವಾರಕ್ಕೊಮ್ಮೆ ಸ್ತ್ರೀನಂತೆ ಬದಲಾಗಿ ಮ್ಯಾಂಚೆಸ್ಟರ್‌ನ ಸಲಿಂಗಕಾಮಿ ಹಳ್ಳಿಗೆ ಹೊರಟು ಹೋಗುತ್ತಾನೆ. ಅಲ್ಲಿ ಅವನು ನಿರಾಳನಾಗಿರುತ್ತಾನೆ. ಅಲ್ಲದೆ, ಆತನ ಬಗ್ಗೆ ಪತ್ನಿಗೂ ಸಹ ತಿಳಿದಿದೆ. ಆದ್ದರಿಂದ ನೀವು ರಾಜಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಇನ್ನೊಂದು ಮಾರ್ಗವನ್ನು ಕಂಡುಕೊಳ್ಳುವುದಕ್ಕಿಂತ ಮೊದಲು ನಿಮ್ಮ ಪತ್ನಿ ಬಳಿ ಕೇಳುವುದು ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಕೊಲೀನ್ ಹೇಳಿದ್ದಾರೆ. (ಏಜೆನ್ಸೀಸ್)