'ತಲೈವಾ' ಚಿತ್ರಕ್ಕೆ ಸಂಕಷ್ಟ! ರಜನಿಕಾಂತ್ 'ಕೂಲಿ' ಸಿನಿಮಾಗೆ ಲೀಗಲ್ ನೋಟಿಸ್​ ಕೊಟ್ಟ ಇಳಯರಾಜ

WhatsApp Image 2024-05-01 at 5.30.51 PM
Published on

ತಮಿಳುನಾಡು: ಭಾರತೀಯ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ, ಸಂಗೀತಗಾರ ಇಳಯರಾಜ ಅವರು ಇದೀಗ ತಮಿಳಿನ ಸೂಪರ್​ಸ್ಟಾರ್​ ರಜನಿಕಾಂತ್ ಅವರ ಮುಂಬರುವ 'ಕೂಲಿ' ಚಿತ್ರತಂಡಕ್ಕೆ ಲೀಗಲ್ ನೋಟಿಸ್​ ರವಾನಿಸಿದ್ದಾರೆ. 1983ರ ತೆರೆಕಂಡ 'ತಂಗಾ ಮಾಗನ್​' ಸಿನಿಮಾದ ಹಾಡೊಂದನ್ನು ತಮ್ಮ ಅನುಮತಿ ಇಲ್ಲದೆ, ಗಮನಕ್ಕೆ ತರದೆ ಬಳಸಿಕೊಂಡ ಹಿನ್ನೆಲೆ ನೋಟಿಸ್ ನೀಡಿರುವುದಾಗಿ ವರದಿ ತಿಳಿಸಿದೆ.

ಸನ್​ ಪಿಕ್ಚರ್ಸ್​ಗೆ ನೋಟಿಸ್​ ನೀಡಿರುವ ಇಳಯರಾಜ, 'ಕೂಲಿ' ಚಿತ್ರತಂಡವು 1983ರಲ್ಲಿ ರಿಲೀಸ್ ಆದ 'ತಂಗಾ ಮಾಗನ್' ಸಿನಿಮಾದಿಂದ 'ವಾ..ವಾ..ಪಕ್ಕಂ ವಾ' ಹಾಡನ್ನು ನಮ್ಮ ಅನುಮತಿ ಪಡೆಯದೆ, ಅರಿವಿಗೆ ಬಾರದಂತೆ ಬಳಸಿಕೊಂಡಿರುವುದು ಸರಿಯಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನೋಟಿಸ್​ನಲ್ಲಿ ನಮೂದಿಸಲಾದ ವಿಷಯ ಈ ಕೆಳಕಂಡಂತಿದೆ.

"ನಮ್ಮ ದೂರುದಾರರು ಭಾರೀ ಅಚ್ಚರಿ, ಆಘಾತಕ್ಕೊಳಗಾಗಿದ್ದು, ಯಾವುದೇ ಅನುಮತಿ ಇಲ್ಲದೆ, ನಮ್ಮ ತಂಡದವರ ಗಮನಕ್ಕೆ ತರದೆ ಹಾಡಿನ ಕೆಲಸಗಳನ್ನು ಬಳಸಿಕೊಂಡಿರುವುದು ತಪ್ಪು. ಈ ವಿಚಾರಕ್ಕೆ ನಮ್ಮ ಅಸಮಾಧಾನ ಇದೆ. ಹಾಗಾಗಿ, ಈ ನೋಟಿಸ್​ ರವಾನಿಸುತ್ತಿದ್ದೇವೆ" ಎಂದು ಲೀಗಲ್​ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ರಜನಿಕಾಂತ್ ಅಭಿಮಾನಿಗಳು ಶಾಕ್ ಆಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net