ಐಐಟಿ ಕ್ಯಾಂಟೀನ್​ನಲ್ಲಿ ಕೆಲಸ ಮಾಡ್ತಿದ್ದವ ಲೇಡಿಸ್ ಹಾಸ್ಟೆಲ್​ ಬಾತ್​ರೂಮ್​ ಒಳಗೆ ಇಣುಕಿ ನೋಡಿ ಸಿಕ್ಕಿಬಿದ್ದ!

IIT Bombay
ಐಐಟಿ ಮುಂಬೈ ಕ್ಯಾಂಪಸ್
Published on

ನವದೆಹಲಿ: ಚಂಡೀಗಢ ಯುನಿವರ್ಸಿಟಿ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯರ ಸ್ನಾನದ ದೃಶ್ಯ ವಿಡಿಯೋ ಮಾಡಿ, ಬಹಿರಂಗಗೊಳಿಸಿದ ಬೆನ್ನಿಗೇ ಐಐಟಿ ಕ್ಯಾಂಪಸ್​​ವೊಂದರಲ್ಲಿ ಕೂಡ ಅಂಥದ್ದೇ ಒಂದು ಪ್ರಕರಣ ವರದಿಯಾಗಿದೆ.

ಐಐಟಿ ಮುಂಬೈ ಕ್ಯಾಂಪಸ್​ನಲ್ಲಿನ ಕ್ಯಾಂಟೀನ್​ನಲ್ಲಿ ಕೆಲಸ ಮಾಡುತ್ತಿದ್ದವ, ಅದೇ ಕ್ಯಾಂಪಸ್​​ನಲ್ಲಿದ್ದ ಲೇಡಿಸ್ ಹಾಸ್ಟೆಲ್​ನ ಬಾತ್​ರೂಮ್​ನೊಳಕ್ಕೆ ಇಣುಕಿ ನೋಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪೆಸ್ಟ್ ಕಂಟ್ರೋಲ್ ಕೆಲಸದ ಹಿನ್ನೆಲೆಯಲ್ಲಿ ಐಐಟಿ ಕ್ಯಾಂಟೀನ್​ಗೆ ರಜೆ ನೀಡಲಾಗಿತ್ತು. ಅದಾಗ್ಯೂ ಈತ ಕ್ಯಾಂಪಸ್​ನಲ್ಲೇ ಉಳಿದುಕೊಂಡಿದ್ದು, ಭಾನುವಾರ ರಾತ್ರಿ ಅಲ್ಲಿನ ಲೇಡಿಸ್ ಹಾಸ್ಟೆಲ್​ ಬಾತ್​​ರೂಮ್​ನೊಳಕ್ಕೆ ಇಣುಕಿ ನೋಡಲು ಹೋಗಿದ್ದ. ಇದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬಳು ಬೇರೆಯವರಿಗೆ ತಿಳಿಸಿ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.

ಆತ ಕೆಲವು ವಿಡಿಯೋ ಮಾಡಿಕೊಂಡಿದ್ದಾನೆ ಎಂಬ ಆರೋಪ ವ್ಯಕ್ತವಾಗಿದ್ದರೂ, ಪೊಲೀಸರು ಆತನ ಮೊಬೈಲ್ ಫೋನ್​ ವಶಕ್ಕೆ ಪಡೆದು ಪರಿಶೀಲಿಸಿದಾಗ ಯಾವುದೇ ಅಶ್ಲೀಲ ವಿಡಿಯೋ ಕಂಡುಬಂದಿಲ್ಲ. ಆತನನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ಮಹೇಶ್ವರ್ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net