ಬೆಂಗಳೂರು ಐಐಎಸ್​ಸಿ - ಬಿಎಸ್ಸಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

IISC
Published on

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ನಾಲ್ಕು ವರ್ಷಗಳ ಬಿಎಸ್ಸಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 6 ಕೊನೆಯ ದಿನವಾಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ಐಐಎಸ್ಸಿಯ ಅಧಿಕೃತ ಸೈಟ್ Iisc.ac.in ಮೂಲಕ ವಿದ್ಯಾರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು 2019ರಲ್ಲಿ 12 ನೇ ತರಗತಿ / ತತ್ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಮುಖ್ಯ ವಿಷಯವಾಗಿ ಅಧ್ಯಯನ ಮಾಡಿ ಪಾಸಾಗಿರಬೇಕು.

ಪ್ರಮುಖ ಅರ್ಹತಾ ಮಾನದಂಡಗಳು ಹಾಗೂ ವಿವರಗಳಿಗೆ ಅಧಿಕೃತ ವೆಬ್​ಸೈಟ್ https://www.iisc.ac.in ​ನಲ್ಲಿರುವ ಅಧಿಸೂಚನೆ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net