

ನವದೆಹಲಿ : ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಪ್ರೊಗ್ರಾಮ್ಗಳ ಪ್ರವೇಶಕ್ಕೆ ಮರು ನೋಂದಣಿ ಪ್ರಕ್ರಿಯೆಯ ಅವಧಿಯನ್ನು ಆಗಸ್ಟ್ 16 ರ ವರೆಗೆ ವಿಸ್ತರಿಸಲಾಗಿದೆ.
ಪ್ರವೇಶಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ವಿದ್ಯಾರ್ಥಿಗಳು ಇಗ್ನೋದ ಅಧಿಕೃತ ಸೈಟ್ ignou.ac.in ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ ಮತ್ತು ಪದವಿ, ಸ್ನಾತಕೋತ್ತರ ಸರ್ಟಿಫಿಕೇಟ್ (ಪಿಜಿ ಸರ್ಟಿಫಿಕೇಟ್), ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿ), ಸರ್ಟಿಫಿಕೇಟ್, ಡಿಪ್ಲೊಮಾ, ಮತ್ತು ಅವೇರ್ನೆಸ್ ಲೆವೆಲ್ ಪ್ರೊಗ್ರಾಮ್ಗಳಿಗೆ ಪ್ರವೇಶ ಪಡೆಯಲು ಆಗಸ್ಟ್ 16 ರವರೆಗೆ ಅರ್ಜಿ ಸಲ್ಲಿಸಬಹುದು.
ಎಂ.ಎ (ಇಂಗ್ಲಿಷ್), ಬಿ.ಎ (ಹಿಂದಿ), ಪಿಜಿ ಡಿಪ್ಲೊಮಾ ಗ್ರಾಮೀಣಾಭಿವೃದ್ಧಿ, ವಯಸ್ಕರ ಶಿಕ್ಷಣ (ಪಿಜಿ ಸರ್ಟಿಫಿಕೇಟ್), ಪರಿಸರ, ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿ (ಅಪ್ರೀಸಿಯೇಷನ್ ಕೋರ್ಸ್) ಹಣ್ಣುಗಳು ಮತ್ತು ತರಕಾರಿಗಳಿಂದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಹೈನುಗಾರಿಕೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳು- ಈ ಪ್ರೋಗ್ರಾಮ್ಗಳಲ್ಲಿವೆ.