ಫೇಸ್​ ಪ್ಯಾಕ್​ ಹಾಕುವಾಗ ಎಂದಿಗೂ ಈ ಹಂತಗಳನ್ನು ಮರೆಯಬೇಡಿ! Face pack

untitled-design-2025-10-08t173300075-68e65307000af
Published on

Face pack: ಪ್ರತಿಯೊಬ್ಬರು ಕನ್ನಡಿಯ ಮುಂದೆ ನಿಂತಾಗ ಚರ್ಮವು ಆರೋಗ್ಯಕರ ಕಾಂತಿಯುತವಾಗಿ ಕಾಣಬೇಕೆಂದು ಬಯಸುತ್ತಾರೆ. ಮುಖದಲ್ಲಿ ಯಾವುದೇ ಕಲೆಗಳು, ಮೊಡವೆಗಳು ಇಲ್ಲದೆ, ಯಾವಾಗಲು ಯೌವನದಂತೆ ಕಾಣಲು ಬಯಸುತ್ತಾರೆ. ಹಾಗಾಗಿ ಜನರು ನಾವು ದುಬಾರಿ ಕ್ರೀಮ್​ಗಳ ಮೊರೆಹೋಗುತ್ತೇವೆ. ಇಲ್ಲವೇ ಪಾರ್ಲರತ್ತ ಮುಖ ಮಾಡುತ್ತವೆ. ಹಾಗಾಗಿ ನೀವು ಮನೆಯಲ್ಲಿಯೇ ಈ ರೀತಿಯ ಮನೆಮದ್ದುಗಳನ್ನು ಬಳಸಿ ಇವು ನಿಮ್ಮ ಚರ್ಮವನ್ನು ಆಳವಾಗಿ ಪೋಷಿಸಲು ಸಹಾಯ ಮಾಡುತ್ತವೆ.

ಬೇಕಾಗುವ ಪದಾರ್ಥಗಳು

* 2 ಚಮಚ ಅಕ್ಕಿಹಿಟ್ಟು

* 1 ಚಮಚ ಅಲೊವೆರಾ ಜೆಲ್​

* 1 ಚಮಚ ರೋಸ್​ ವಾಟರ್​

ನಿಮ್ಮ ಮುಖಕ್ಕೆ ಅಕ್ಕಿಹಿಟ್ಟನ್ನು ಹಚ್ಚುವುದರಿಂದ ಇದು ನಿಮ್ಮ ಮುಖದಲ್ಲಿರುವ ಕೊಳಕನ್ನು ತೆಗೆಯಲು ಸಹಾಯ ಮಾಡುತ್ತದೆ. ಅಲೊವೆರಾ ಚರ್ಮವನ್ನು ತಂಪಾಗಿಸುತ್ತದೆ ಹಾಗೇ ರೋಸ್​ ವಾಟರ್​ ಚರ್ಮಕ್ಕೆ ಸೌಮ್ಯವಾದ ಪರಿಮಳ ನೀಡುತ್ತದೆ.

ಸ್ಕ್ರಬ್​ನೊಂದಿಗೆ ಪ್ರಾರಂಭಿಸಿ

ಮುಖವನ್ನು ಸೌಂದರ್ಯದಿಂದ ಕಾಣುವಂತೆ ಮಡಲು ಮೊದಲು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಒಂದು ಚಮಚ ಅಕ್ಕಿ ಹಿಟ್ಟು ಮತ್ತು ಅಲೊವೆರಾ ಜೆಲ್​ ಸೇರಿಸಿ ಮುಖಕ್ಕೆ ಹಚ್ಚಿ. 3 ನಿಮಿಷಗಳ ಕಾಲ ಮಸಾಜ್​ ಮಾಡಿ. ಇದು ಚರ್ಮದ ಕೋಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಂಧ್ರದಲ್ಲಿ ಸಂಗ್ರಹವಾಗಿರುವ ಎಣ್ಣೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.

ಫೇಸ್ ಪ್ಯಾಕ್

ಸ್ಕ್ರಬ್ ಮಾಡಿದ ನಂತರ, ಈ ಮಿಶ್ರಣಕ್ಕೆ ರೋಸ್ ವಾಟರ್ ಸೇರಿಸಿ ಮಿಶ್ರಣ ತಯಾರಿಸಿ. ನಂತರ ಈ ಪೇಸ್ಟ್​ನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಈ ಫೇಸ್​ ಪ್ಯಾಕ್​ ಚರ್ಮವನ್ನು ಪೋಷಿಸುತ್ತದೆ. ಎಣ್ಣೆಯುಕ್ತ ಚರ್ಮವನ್ನು ಕಡಿಮೆ ಮಾಡುತ್ತದೆ. ಮುಖಕ್ಕೆ ಹೊಳಪನ್ನು ನೀಡುತ್ತದೆ.

ಮಾಯಿಶ್ಚರೈಸಿಂಗ್​ ಮಾಡಿ

ಫೇಸ್ ಪ್ಯಾಕ್ ತೆಗೆದ ನಂತರ ಚರ್ಮ ಒಣಗಿದಂತೆ ಗೋಚರಿಸಬಹುದು. ಆದರಿಂದ ಮುಖವನ್ನು ಮಾಯಿಶ್ಚರೈಸಿಂಗ್​ ಮಾಡಲು ಮುಖಕ್ಕೆ ಅಲೊವೆರಾ ಜೆಲ್​ ಹಚ್ಚಿ. ಇದು ಚರ್ಮದಲ್ಲಿರುವ ತೇವಾಂಶವನ್ನು ಉಳಿಸಿ, ಮುಖ ಒಣಗದಂತೆ ಮಾಡಲು ಸಹಾಯ ಮಾಡುತ್ತದೆ. ಈ ವಿಧಾನವನ್ನು ಅನುಸರಿಸದೆ ಇದ್ದರೆ, ಚರ್ಮ ಬೇಗನೆ ಒಣಗುತ್ತದೆ.

ಪ್ರಯೋಜನಗಳು

ನೀವು ವಾರಕ್ಕೆ ಎರಡು ಬಾರಿ ಮನೆಯಲ್ಲಿ ತಯಾರಿಸಿದ ಫೇಶಿಯಲ್​ನ್ನು ಬಳಸಿದಾಗ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಪಡೆಯಬಹುದು. ಈ ಮೂರು ಪದಾರ್ಥಗಳಿಂದ ನಿಮ್ಮ ಚರ್ಮವು ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಅಕ್ಕಿ ಹಿಟ್ಟು ಚರ್ಮದ ಮೇಲಿರುವ ಟ್ಯಾನಿಂಗ್​ಹಾಗೂ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ರೋಸ್ ವಾಟರ್ ಮುಖಕ್ಕೆ ನೈಸರ್ಗಿಕವಾಗಿ ತಾಜಾತನವನ್ನು ನೀಡುತ್ತದೆ. ಇದು ಕಡಿಮೆ ಹಣದಲ್ಲಿ ದುಬಾರಿ ಚಿಕಿತ್ಸೆಗಳಿಗಿಂತ ಉತ್ತಮವಾಗಿ ಮುಖವನ್ನು ಹೊಳೆಯುವಂತೆ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net