

weight gain dessert : ಇಂದಿನ ದಿನಗಳಲ್ಲಿ ಹಲವಾರು ಜನ ತೂಕ ಹೆಚ್ಚಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಜಿಮ್, ಮಾತ್ರೆಗಳು, ಆರೋಗ್ಯ ತಪಾಸಣೆ ಹಾಗೂ ಇನ್ನಿತರವುಗಳ ಮೊರೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ನಿರಾಸೆ ವ್ಯಕ್ತಪಡಿಸುತ್ತಾರೆ. ಹಾಗಾಗಿ ತೂಕ ಹೆಚ್ಚಿಸುಕೊಳ್ಳಲು ಪ್ರಯತ್ನಿಸುವವರು ಈ ರೀತಿಯ ಆಹಾರ ಸೇವಿಸಿ ಇದು ತೂಕ ಹೆಚ್ಚಿಸಲು ಬಹಳಷ್ಟು ಸಹಾಯ ಮಾಡುತ್ತದೆ.
* 1 ಕಪ್ ಓಟ್ಸ್
* 1/4 ಕಪ್ ಒಣದ್ರಾಕ್ಷಿ
* 1 ಚಮಚ ಕೋಕೋ ಪೌಡರ್
* 1/2 ಕಪ್ ಚೆರಿ
* 1 ಚಮಚ ಎಳ್ಳು
* ಬಾದಾಮಿ
* ಕಡಲೆಕಾಯಿ
* ಒಣದ್ರಾಕ್ಷಿ
* 2 ಬಾಳೆಹಣ್ಣು
* 1/2 ಕಪ್ ಡಾರ್ಕ್ ಚಾಕೊಲೇಟ್
* 1/2 ಚಮಚ ತೆಂಗಿನ ಎಣ್ಣೆ
ಮೊದಲು ಒಂದು ಪಾತ್ರೆಗೆ ಓಟ್ಸ್, ಒಣ ದ್ರಾಕ್ಷಿ, ಕೋಕೋ ಪೌಡರ್, ಎಳ್ಳು ಹಾಕಿ ಇಟ್ಟುಕೊಳ್ಳಿ. ನಂತರ ಚೆರ್ರಿ, ಬಾದಾಮಿ, ಶೇಂಗಾ, ಕಪ್ಪುದ್ರಾಕ್ಷಿಯನ್ನು ಕತ್ತರಿಸಿ. ಇದಾದ ಬಳಿಕ ಬಾಳೆಹಣ್ಣನ್ನು ಮೆದುಗೊಳಿಸಿ ಅದನ್ನು ಮಿಶ್ರಣಕ್ಕೆ ಸೇರಿಸಿ ಅದಕ್ಕೆ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ. ರೆಡಿ ಇಟ್ಟುಕೊಂಡಿರುವ ಮಿಶ್ರಣವನ್ನು ದುಂಡಾಕಾರದ ಟ್ರೇ ಒಳಗೆ ಹಾಕಿ. ಇದಾದ ಬಳಿಕ ಒಂದು ಬಟ್ಟಲಿಗೆ ಚಾಕೊಲೇಟ್ನ್ನು ಮಿಕ್ಸಿಗೆ ಹಾಕಿ ಅದನ್ನು ಸಿರಪ್ ಮಾಡಿ ಅದನ್ನು ರೆಡಿ ಮಾಡಿಟ್ಟುಕೊಂಡಿರುವ ಚಾಕಲೇಟ್ನ್ನು ಮೇಲೆ ಸುರಿಯಿರಿ. ನಂತರ ಸೇವಿಸಿ....(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ