ಪದೇಪದೆ ಈ ತಪ್ಪು ಮಾಡಿದ್ರೆ ನಿಮ್ಮ Instagram ಬಂದ್​ ಆಗುತ್ತೆ ಹುಷಾರ್!; ನಿರ್ಬಂಧವಾಗದಿರಲು ಏನು ಮಾಡಬೇಕು?: ಇಲ್ಲಿದೆ ಮಾಹಿತಿ

dk - 2025-02-23T173337.546 (1)
Published on

ನೀವು ಇನ್​ಸ್ಟಾಗ್ರಾಮ್(INSTAGRAM) ಖಾತೆ ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಮುಖ್ಯವೆನಿಸಬಹು. ಹೌದು, ಕೆಲಬು ಬಾರಿ ನೀವು ಮಾಡುವ ತಪ್ಪುಗಳಿಂದಾಗಿ ಮತ್ತು ನಿಮಗೆ ಅರಿವಿಗೆ ಬಾರದ ಸಣ್ಣ ತಪ್ಪುಗಳಿಂದ ನಿಮ್ಮ ಇನ್ಸ್​ಸ್ಟಾಗ್ರಾಂ ಖಾತೆಯನ್ನು ಶಾಶ್ವತವಾಗಿ ಮುಚ್ಚಿಹೊಗಬಹುದು.ನಿಮ್ಮಖಾತೆ ಒಂದು ವೇಳೆ ಅಮನಾತಗೊಂಡ್ರೆ ಅದನ್ನು ಹೇಗೆ ಸರಿಪಡಿಸಬಹುದು ಎಂದು ಕೆಲ ಸಲಹೆಗಳನ್ನು ತಿಳಿಯೋಣ.

ಹೌದು, ನಿಮ್ಮ ಖಾತೆಯೂ ಇನ್ಸ್​ಸ್ಟಾಗ್ರಾಂ ನೀತಿಗಳನ್ನು(ಮಾನದಂಡ) ಅನುಸರಿಸಿದಿದ್ದರೆ ಅದನ್ನು ನಿಷೇಧಿಸಬಹುದು. ಇದಲ್ಲದೇ ಯಾವುದೆ ಅನುಚಿತ ವರ್ತನೆಗಳನ್ನು ಹಂಚಿಕೊಂಡರೆ ಇದು ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗುವುದು.

ಇನ್ನು ಇನ್​ಸ್ಟಾಗ್ರಾಮ್​​ ವೇದಿಕೆಯಲ್ಲಿ ಹಲವು ಹ್ಯಾಶ್​ಟ್ಯಾಗ್​ಗಳನ್ನು ನಿರ್ಬಂಧಿಸಲಾಗಿದೆ. ನೀವು ಅವುಗಳನ್ನು ಪದೇಪದೆ ಬಳಸಿದರೆ ನಿಮ್ಮ ಖಾತೆಯನ್ನು ನಿರ್ಬಂಧಿಸಬಹುದು. ಅಲ್ಲದೆ, ನಿಮ್ಮ ಖಾತೆ ನಕಲಿ ಮತ್ತು ವಂಚನೆ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎಂದು ಕಂಡುಬಂದರೆ ಇನ್​ಸ್ಟಾಗ್ರಾಮ್​ ಪರ್ಮನೆಂಟ್​ ಬಂದ್​ ಮಾಡಬಹುದು.

ಏನೆಲ್ಲಾ ಮಾಡಬಾರದು ತಿಳಿಯಿರಿ

Instagram ವೇದಿಕೆ ಮಾನದಂಡಗಳನ್ನು ಪಾಲಿಸಬೇಕು. ನಿಷೇಧಿತ ಹ್ಯಾಷ್​​ಟ್ಯಾಗ್​​ಗಳನ್ನು ಬಳಕೆ ಮಾಡಬಾರದು. ಯಾವುದೇ ದೇಶ, ಧರ್ಮ ಅಥವಾ ರಾಜಕೀಯಕ್ಕೆ ಸಂಬಂಧಿಸಿದ ನರಕಾತ್ಮಕ ವಿಷಯಗಳನ್ನು ನಿಮ್ಮ ಖಾತೆಯಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ. ಸಮಾಜವನ್ನು ದಾರಿ ತಪ್ಪಿಸುವಂತ ಮತ್ತು ಅಕ್ಷೇಪರ್ಹಾ ವಿಷಯಗಳನ್ನು ಹಂಚಿಕೊಳ್ಳಬಾರದು.

ಖಾತೆ ನಿರ್ಬಂಧಿಸಿದ್ರೆ ಏನು ಮಾಡಬೇಕು?

ಇನ್​ಸ್ಟಾಗ್ರಾಮ್​ ನಿಮ್ಮ ಖಾತೆಯನ್ನು ನಿಷೇಧಿಸಿದರೆ, ಈ ವಿಷಯಗಳನ್ನು ಅನುಸರಿಸುವ ಮೂಲಕ ನಿಮ್ಮ ಖಾತೆಯನ್ನು ಮರಳಿ ಪಡೆಯಬಹುದು.

Instagram ಅಪ್ಲಿಕೇಶನ್ ತೆರೆಯಿರಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ. ಸಹಾಯ ಕೇಂದ್ರದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇಲ್ಲಿ "ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ" ಎಂಬ ಆಯ್ಕೆಯನ್ನು ಆರಿಸಿ. ನಿಮ್ಮ ಖಾತೆಯ ವಿವರಗಳನ್ನು (ಬಳಕೆದಾರಹೆಸರು, ಇಮೇಲ್, ಫೋನ್ ಸಂಖ್ಯೆ) ಸರಿಯಾಗಿ ಭರ್ತಿ ಮಾಡಿ.

ಖಾತೆ ಮುಚ್ಚುವಿಕೆಗೆ ಕಾರಣವನ್ನು ಆಯ್ಕೆಮಾಡಿ ಮತ್ತು ನೀವು ಯಾವ ಮಾರ್ಗಸೂಚಿಗಳನ್ನು ಅನುಸರಿಸಲಿಲ್ಲ ಎಂಬುದನ್ನು ತಿಳಿಸಿ. ನಿಮ್ಮ ಮನವಿಯನ್ನು ಸಲ್ಲಿಸಿ ಮತ್ತು Instagram ನ ಪ್ರತಿಕ್ರಿಯೆಗಾಗಿ ಕಾಯಿರಿ.

ನೀವು ಈ ನಿಯಮಗಳನ್ನು ಅನುಸರಿಸಿದರೆ, ನಿಮ್ಮ ಖಾತೆಯು ಸುರಕ್ಷಿತವಾಗಿರುತ್ತದೆ ಮತ್ತು ಯಾವುದೇ ನಿಷೇಧ ಅಥವಾ ಅಮಾನತುಗೊಳಿಸುವಿಕೆಯಿಂದ ರಕ್ಷಿಸಲ್ಪಡುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net