ಮದ್ಯಪ್ರಿಯರಿಗೆ ಗುಡ್​ ನ್ಯೂಸ್ ಕೊಟ್ಟ ಮಹಾರಾಷ್ಟ್ರದ ಆರೋಗ್ಯ ಸಚಿವ ಟೋಪೆ: ಷರತ್ತುಗಳು ಅನ್ವಯ!

illegal-liquor
Published on

ಮುಂಬೈ: ಲಾಕ್​ಡೌನ್ ಕಾರಣಕ್ಕೆ ಕಂಗಾಲಾಗಿರುವುದು ಕುಡುಕರು. ಮದ್ಯ ಸಿಗದೆ ಹತಾಶರಾಗಿದ್ದಾರೆ ಬಹುತೇಕರು. ಈ ನಡುವೆ, ಮಹಾರಾಷ್ಟ್ರದ ಕುಡುಕರಿಗೆ ಅಲ್ಲಿನ ಆರೋಗ್ಯ ಸಚಿವ ರಾಜೇಶ್ ಟೋಪೆ ಒಂದು ಗುಡ್​ ನ್ಯೂಸ್ ಕೊಟ್ಟಿದ್ದಾರೆ. ಆದರೆ, ಷರತ್ತುಗಳು ಅನ್ವಯ!

ಕರೊನಾ ಸೋಂಕು ಹರಡದಂತೆ ತಡೆಯಲು ಲಾಕ್​ಡೌನ್ ಚಾಲ್ತಿಯಲ್ಲಿದ್ದು, ನಿಯಮಗಳನ್ನು ಎಲ್ಲರೂ ಪಾಲಿಸುವುದು ಕಡ್ಡಾಯ. ಮಹಾರಾಷ್ಟ್ರದಲ್ಲಿ ಹೆಚ್ಚು ಸೋಂಕು ಪೀಡಿತರಿದ್ದಾಗ್ಯೂ, ಡಬಲ್ ಆಗುವ ಅವಧಿ ಈಗ ಏಳು ದಿನಕ್ಕೆ ಏರಿಕೆಯಾಗಿದೆ. ಇದು ಒಂದು ಗುಡ್​ ನ್ಯೂಸ್. ಇನ್ನು ಮದ್ಯಪ್ರಿಯರಿಗೂ ಒಂದು ಗುಡ್​ನ್ಯೂಸ್​ ಇದೆ ಎಂದ ಆರೋಗ್ಯ ಸಚಿವ ಟೋಪೆ, ಒಂದೊಮ್ಮೆ ಕುಡುಕರು ಸರಿಯಾದ ರೀತಿಯಲ್ಲಿ ಸೋಷಿಯಲ್ ಡಿಸ್ಟೆನ್ಸಿಂಗ್​ ಮೇನ್​ಟೇನ್ ಮಾಡಿದರೆ ಆಗ ಮದ್ಯದಂಗಡಿಯ ವಹಿವಾಟಿನ ಮೇಲೆ ಯಾವುದೇ ನಿರ್ಬಂಧ, ನಿಷೇಧ ಇರದು ಎಂದು ಹೇಳಿದ್ದಾರೆ.

ಟೋಪೆ ಅವರು ಮಹಾರಾಷ್ಟ್ರ ಸರ್ಕಾರದ ಏಪ್ರಿಲ್​ 17ರ ಸುತ್ತೋಲೆ ಕುರಿತು ಸ್ಪಷ್ಟೀಕರಣ ನೀಡುತ್ತ ಮೇಲಿನ ಮಾತು ಹೇಳಿದ್ದರು. ಕರೊನಾ ಸೋಂಕು ರಹಿತ ಪ್ರದೇಶಗಳಲ್ಲಿ ಕೈಗಾರಿಕೆ ಮತ್ತು ಇತರೆ ವಾಣಿಜ್ಯ ಚಟುವಟಿಕೆ ಯಾವಾಗ ಆರಂಭವಾಗುತ್ತದೆಯೋ ಆಗ ಮದ್ಯದಂಗಡಿಯೂ ವ್ಯಾಪಾರ ಆರಂಭಿಸಲಿದೆ ಎಂಬ ಅಂಶ ಅದರಲ್ಲಿ ಇತ್ತು. ಈ ಬಗ್ಗೆ ಹೆಚ್ಚಿನ ವಿವರಣೆಯನ್ನೇನೂ ಅವರು ಕೊಡಲಿಲ್ಲ. ಸದ್ಯ ಲಾಕ್​ಡೌನ್ ನಿಯಮವನ್ನು ರಾಜ್ಯದೆಲ್ಲೆಡೆ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net