ಅವಘಡವೊಂದು ನಡೆದು ಹೋಯ್ತು ಎಂದಿತು ಇಸ್ರೇಲ್ ಸೇನೆ: ಆಗಿದ್ದಾದರೂ ಏನು?

Israel Conflict
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಹಮಾಸ್ ಉಗ್ರರ ದಾಳಿಯಿಂದ ತತ್ತರಿಸಿರುವ ಇಸ್ರೇಲ್​ನ ಪ್ರತಿದಾಳಿಯಿಂದಾಗಿ ಅಲ್ಲಿ ರಣಭೀಕರ ಪರಿಸ್ಥಿತಿ ಉಂಟಾಗಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ತಿಳಿಯಾಗಿಲ್ಲ. ಈ ಮಧ್ಯೆಯೇ ಅವಘಡವೊಂದು ನಡೆದುಹೋಗಿದೆ ಎಂಬುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.

ಇಸ್ರೇಲ್​ನ ರಕ್ಷಣಾ ಪಡೆಯ ಅಧಿಕೃತ ಎಕ್ಸ್ ಹ್ಯಾಂಡಲ್​ ಮೂಲಕ ಈ ವಿಷಯ ಬಹಿರಂಗಪಡಿಸಲಾಗಿದೆ. 'ಸ್ವಲ್ಪ ಸಮಯದ ಮೊದಲು ಹೀಗಾಯಿತು..' ಎಂದು 9 ಗಂಟೆಯ ಸುಮಾರಿಗೆ ಇಸ್ರೇಲ್ ಡಿಫೆನ್ಸ್ ಫೋರ್ಸಸ್​ನ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಲಾಗಿದೆ.

ಕೆರೆಮ್ ಶಲೊಮ್ ಪ್ರದೇಶದ ಗಡಿಭಾಗದಲ್ಲಿ ಇರುವ ಈಜಿಪ್ಟಿಯನ್ ಪೋಸ್ಟ್ ಮೇಲೆ ಇಸ್ರೇಲ್ ರಕ್ಷಣಾ ಪಡೆಯ ಟ್ಯಾಂಕ್​ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ಅಪ್ಪಳಿಸಿದೆ. ಈ ಪ್ರಕರಣದ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಾದಿಸುತ್ತೇವೆ ಎಂಬುದಾಗಿ ಈ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಹೇಳಿಕೊಳ್ಳಲಾಗಿದೆ.

ಸರಿಯಾಗಿ ಎರಡು ವಾರಗಳ ಹಿಂದೆ ಇಸ್ರೇಲ್​ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದು, ಆ ನಂತರದ ಎರಡು ವಾರಗಳಲ್ಲಿ ಏನಾಯ್ತು ಎಂಬ ಝಲಕ್ ಕುರಿತ ವಿಡಿಯೋವೊಂದನ್ನೂ ಐಡಿಎಫ್​ ಎರಡು ಗಂಟೆಗಳ ಹಿಂದೆ ಹಂಚಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net