ನೀವು ಕಲಿಸಿಕೊಟ್ಟ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕಲಿಸುವೆ; ಫೋಟೋ ಹಂಚಿಕೊಂಡು ಸುಧಾಮೂರ್ತಿ ಮಗಳು ಅಕ್ಷತಾ ಹೇಳಿದಿಷ್ಟು.. | Sudha Murthy

dk (80)
Published on

ಬೆಂಗಳೂರು: ನಮ್ಮ ಕನ್ನಡದ ಹೆಮ್ಮೆ ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ(Sudha Murthy) ಅವರ ಸರಳತೆ ಮತ್ತು ಒಳ್ಳೆಯ ನಡೆ - ನುಡಿ, ವ್ಯಕ್ತಿತ್ವದ ಬಗ್ಗೆ ಅಗ್ಗಾಗೆ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗಳು ಅಕ್ಷತಾ ಮೂರ್ತಿ ತಾಯಿ ಜತೆಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಒಂದಿಷ್ಟು 'ತಾಯಿ-ಮಗಳ' ಸಂಬಂಧದ ಬಗ್ಗೆ ಮಾತುಗಳನ್ನಾಡಿದ್ದಾರೆ.

ಈ ಕುರಿತು ಇನ್ಸ್​ಸ್ಟಾಗ್ರಾಮ್​ನಲ್ಲಿ ತಮ್ಮ ತಾಯಿಯ ಜತೆಗೆ ಕೂತಿರುವ ಪೋಟೋವೊಂದನ್ನು​ ಅಕ್ಷತಾ ಮೂರ್ತಿ ಹಂಚಿಕೊಂಡಿದ್ದಾರೆ. ತಾಯಿ-ಮಗಳ ಸಂಬಂಧವು ವಿಶೇಷವಾದದ್ದು. ನಾನು ನನ್ನ ತಾಯಿಯಿಂದ ಕಲಿಯುವುದನ್ನು ಮುಂದುವರಿಸುತ್ತೇನೆ ಮತ್ತು ಅದೇ ಮೌಲ್ಯಗಳನ್ನು ನನ್ನ ಹೆಣ್ಣುಮಕ್ಕಳಿಗೂ ರವಾನಿಸಬೇಕೆಂದು ಆಶಿಸುತ್ತೇನೆ ಎಂದು ಶಿರ್ಷೀಕೆ ಬರೆದುಕೊಂಡಿದ್ದಾರೆ.

ಕಳೆದ ವರ್ಷ, ಸುಧಾ ಮೂರ್ತಿ ಅವರು ತಮ್ಮ ಮಗಳು ತನಗೆ ಹಿಂತಿರುಗಿಸುವ ಶಕ್ತಿಯನ್ನು ಅರಿತುಕೊಂಡಳು ಮತ್ತು ತನ್ನ ಪರೋಪಕಾರಿ ಪ್ರಯಾಣವನ್ನು ಪ್ರಾರಂಭಿಸಲು ಪ್ರೇರೇಪಿಸಿದರು ಎಂದು ಬಹಿರಂಗಪಡಿಸಿದ್ದರು. ಪೋಸ್ಟ್ 46,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಮತ್ತು ಬಳಕೆದಾರರು ಇಬ್ಬರು ಮಹಿಳೆಯರ ನಡುವಿನ ಸಂಬಂಧವನ್ನು ಶ್ಲಾಘಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net