ವೇಗವಾಗಿ ಚಲಿಸುತ್ತಿರುವ ಬಸ್​ಗಳ ಮಧ್ಯೆ ಸಿಲುಕಿದ ವ್ಯಕ್ತಿ; ಮುಂದೇನಾಯ್ತು ನೀವೇ ನೋಡಿ.. | Viral Video

dk (14) (1)
Published on

ತಮಿಳುನಾಡು: ವೇಗವಾಗಿ ಚಲಿಸುತ್ತಿದ್ದ ಎರಡು ಬಸ್​ಗಳ ಮಧ್ಯೆ ಆಕಸ್ಮಿಕವಾಗಿ ಸಿಲುಕಿದ ವ್ಯಕ್ತಿ ಅದೃಷ್ಟವಶಾತ್​ ಬದುಕಿ ಪಾರಾಗಿರುವ ಘಟನೆ ಇಲ್ಲಿನ ತಂಜಾವೂರಿನಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿದ್ದು, ಇದೀಗ ಈ ಭಯಾನಕ ಕ್ಷಣದ ವಿಡಿಯೋ(Viral Video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಅದೃಷ್ಟವಶಾತ್​ ಬದುಕುಳಿದ ವ್ಯಕ್ತಿ ಭರತ್​ ಎಂದು ಗುರುತಿಸಲಾಗಿದೆ. ಇದೇ ಜ.3ರಂದು ಥಮರ್​ಕೋಟೈನಿಂದ ಪಟ್ಟುಕೋಟೈಗೆ ಪ್ರಯಾಣಿಸಲು ಖಾಸಗಿ ಬಸ್​ ಹತ್ತಲು ಪಾರದಾಡುತ್ತಿದ್ದ ಇತ. ಬಸ್​ ಒಂದನ್ನೂ ಹಿಡಿಯಲು ರಸ್ತೆ ದಾಟುತ್ತಿರಬೇಕಾದರೆ ಏಕಾಏಕಿ ಬಂದ ಖಾಸಗಿ ಬಸ್​ ಸರ್ಕಾರಿ ಬಸ್​ ಅನ್ನು ಹಿಂದಿಕ್ಕಲು ರಭಸವಾಗಿ ಬಂದಿದೆ. ಸರ್ಕಾರಿ ಮತ್ತು ಖಾಸಗಿ ಬಸ್​ಗಗಳ ಮಧ್ಯೆ ಸಿಲುಕಿದ ಭರತ್,​​ ಊಹೆಗೂ ನಿಲುಕದ ಪರಿಸ್ಥಿತಿಯನ್ನು ಎದುರಿಸಿದ್ದಾರೆ.

ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

ಏಕಾಏಕಿ ಬಂದ ಬಸ್​ಗಳ ಮಧ್ಯೆ ಸಿಲುಕಿದ ಭರತ್​​, ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಪರಿಸ್ಥಿತಿ ನಿಭಾಯಿಸಿದೆ ನೆಲಕ್ಕೆ ಉರುಳಿದ್ದಾರೆ. ಬಸ್​ ಕೆಳಗೆ ಬಿದ್ದ ಇವರು ಎರಡು ಬಸ್​ ಹೊದ ಬಳಿಕ ಮರುಳಿ ಎದ್ದು ಬಂದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಸಾಮಾನ್ಯವಾಗಿ ವಿಡಿಯೋ ನೋಡಿದವರಿಗೆ ಇವರ ಮೃತಪಟ್ಟಿರಬಹದು ಎನ್ನುವ ಭಾವನೆ ಬರುವುದರೊಳಗೆ ಬದುಕಿ ಬಂದಿದ್ದಾರೆ. ಇದರ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net