ಅಜೇಯ 72 ರನ್​ ಗಳಿಸುವ ಮೂಲಕ ಹೊಸ ವಿಶ್ವ ದಾಖಲೆ ಬರೆದ ತಿಲಕ್​ ವರ್ಮಾ! | Tilak Verma

dk (78)
Published on

ಚೈನ್ನೈ: ಟೀಮ್​​ ಇಂಡಿಯಾದ ಬ್ಯಾಟರ್​​ ತಿಲಕ್​ ವರ್ಮಾ(Tilak Verma) ಚೈನ್ನೈನ ಚೆಪಾಕ್​ ಕ್ರೀಡಾಂಣಗದಲ್ಲಿ ಇಂಗ್ಲೆಂಡ್​ ವಿರುದ್ದ(ಜ.25) ನಡೆದ ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಅಜೇಯ 48 ರನ್​ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು. ಇದೀಗ ಅಜೇಯ 78 ರನ್​​ಗಳಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಹೌದು, ಕಳೆದ ರಾತ್ರಿ(ಜ.25) ನಡೆದ ಪಂದ್ಯದಲ್ಲಿ 55 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 72 ರನ್​​ ಗಳಿಸಿದ್ದಾರೆ. ಇದರಿಂದ ಇಂಗ್ಲೆಂಡ್​ ನೀಡಿದ್ದ 165 ರನ್​ಗಳನ್ನು ಗುರಿಯನ್ನು 19.2 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 166ರನ್​​ ಗಳಿಸಲು ಸುಲಭವಾಯಿತು.

ಇದೀಗ ತಿಲಕ್​ ವರ್ಮಾ ಕಳೆದ ವರ್ಷ(2024) ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 20 ರನ್​ಗಳಿಗೆ ಔಟಾದ ನಂತರ ಆಡಿದ ಒಟ್ಟು ನಾಲ್ಕು ಇನ್ನಿಂಗ್ಸ್​ನಲ್ಲಿ ಅಜೇಯ(ಔಟಾಗದೆ) 107, 120, 19, 72 ರನ್​ಗಳಸುವ ಮೂಲಕ ಒಟ್ಟು 318 ರನ್​ ಗಳಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಇದುವರೆಗೆ (2023 ರಲ್ಲಿ) ಎರಡು ಪಂದ್ಯಗಳಲ್ಲಿ ಔಟಾಗದೆ 217 ರನ್​​ ಗಳಿಸುವ ಮೂಲಕ ನ್ಯೂಜಿಲ್ಯಾಂಡ್​ನ ಮಾರ್ಕ್​ ಚಾಪರ್​ಮಾನ್ ಹೆಸ​ರಲ್ಲಿ ಈ ದಾಖಲೆ ಇತ್ತು. ಇದೀಗ ತಿಲಕ್​ ವರ್ಮಾ ಪಾಲಾಗಿದೆ.

ಗಾಯದಿಂದ ಬಳಲುತ್ತಿದ್ದ ತಿಲಕ್​ ಕಳೆದ ನವೆಂಬರ್​ನಲ್ಲಿ ಕಾಮ್​ಬ್ಯಾಕ್​ ಮಾಡುವ ಮೂಲಕ ಆರು ಇನಿಂಗ್ಸ್​ನಲ್ಲಿ 185.5 ಸರಾಸರಿಯಲ್ಲಿ ಎರಡು ಶತಕ ಮತ್ತು ಅರ್ಧ ಶತಕ ಬಾರಿಸುವ ಮೂಲಕ 318ರನ್​ ಗಳಿಸಿದ್ದಾರೆ. ಇದುವರೆಗೆ 22 ಪಂದ್ಯಗಳಲ್ಲಿ 21 ಇನಿಂಗ್ಸ್​​ನಲ್ಲಿ ಆಡಿರುವ ತಿಲಕ್​ 707ರನ್​ ಗಳಿಸಿದ್ದಾರೆ.

ಚೈನ್ನೈನ ಚೆಕಾಪ್​ನಲ್ಲಿ ನಡೆದ ಪಂದ್ಯ

ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ(ಜ.25) ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು 2 ವಿಕೆಟ್‌ಗಳ ಜಯ ಸಾಧಿಸುವ ಮೂಲಕ 2-0 ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು (Team India) ಎದುರಾಳಿಗಳನ್ನು ನಾಯಕ ಜೋಸ್ ಬಟ್ಲರ್ (45 ರನ್, 30 ಎಸೆತ, 2 ಬೌಂಡರಿ, 3 ಸಿಕ್ಸರ್) ದಿಟ್ಟ ಪ್ರತಿರೋಧದ ಹೊರತಾಗಿಯೂ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 165 ರನಗ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾಗೆ (Team India) ಆರಂಭದಲ್ಲೇ ಆಘಾತ ನೀಡುವಲ್ಲಿ ಆಂಗ್ಲರು ಸಫಲರಾದರು. ತಿಲಕ್ ವರ್ಮಾ (72 ರನ್, 55 ಎಸೆತ, 4 ಬೌಂಡರಿ, 5 ಸಿಕ್ಸರ್) ಆರ್ಧಶತಕದ ಫಲವಾಗಿ 19.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net