

Unknown Facts: ಈ ಲೋಕದಲ್ಲಿ ಜನಿಸಿದ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯುತ್ತಾರೆ. ಆದರೆ, ಸಾವು ದೇಹಕ್ಕೆ ಮಾತ್ರ ಆತ್ಮಕ್ಕಲ್ಲ ಎಂಬ ನಂಬಿಕಯೇ ಇದೆ. ಅದೇನೆ ಇರಲಿ ಸಾವಂತೂ ಖಚಿತ. ಸತ್ತ ಬಳಿಕ ಮೃತದೇಹವನ್ನು ವಿವಿಧ ವಿಧಾನಗಳಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಕೆಲವರು ಮಣ್ಣಿನಲ್ಲಿ ಹೂತರೆ, ಇನ್ನು ಕೆಲವರು ಬೆಂಕಿಯಲ್ಲಿ ಸುಡುತ್ತಾರೆ.
ಯಾವುದೇ ಮೃತದೇಹವನ್ನು ಬೆಂಕಿಯಲ್ಲಿ ದಹನ ಮಾಡಿದಾಗ ದೇಹದ ಇಡೀ ಭಾಗ ಸುಟ್ಟುಹೋಗುತ್ತದೆ. ಆದಾಗ್ಯೂ, ದೇಹದ ಆ ಒಂದು ಭಾಗ ಮಾತ್ರ ಸುಡದೇ ಹಾಗೇ ಉಳಿಯುತ್ತದೆ. ಯಾವುದು ಆ ಭಾಗ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಹಿಂದು ಪಂಡಿತರ ಪ್ರಕಾರ, ದಹನದ ಕೆಲವೇ ಗಂಟೆಗಳಲ್ಲಿ, ಮೂಳೆಗಳು ಸೇರಿದಂತೆ ಇಡೀ ದೇಹವು ಸುಟ್ಟುಹೋಗುತ್ತದೆ. ಆದಾಗ್ಯೂ, ಹಲ್ಲುಗಳು ಹಾಗೆಯೇ ಇರುತ್ತವೆ. ಹಲ್ಲುಗಳು ಫಾಸ್ಫೈಟ್ ಮತ್ತು ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿದೆ. ಇದರಿಂದಾಗಿ, ಬೆಂಕಿಯನ್ನು ಬಳಸಿದಾಗಲೂ ಅವು ಹಾಗೆಯೇ ಇರುತ್ತವೆ.
ಆದರೆ, ವಿಜ್ಞಾನ ಹೇಳುವುದೇ ಬೇರೆ. ದಹನದ ಸಮಯದಲ್ಲಿ ಸುಮಾರು 1229 ಡಿಗ್ರಿ ಫ್ಯಾರನ್ಹೀಟ್ ಉತ್ಪತ್ತಿಯಾಗುತ್ತದೆ. ಆ ಶಾಖವು ಚರ್ಮ, ನರಗಳು ಮತ್ತು ಮೂಳೆಗಳನ್ನು ಸುಡುತ್ತದೆ. ಅಲ್ಲದೆ, ಇಡೀ ಹಲ್ಲು ಕೂಡ ಬೆಂಕಿಯಲ್ಲಿ ಸುಟ್ಟುಹೋಗುತ್ತದೆ. ಆದರೆ, ಅದರ ಮೇಲಿನ ದಂತಕವಚವು ಮಾತ್ರ ಹಾಗೆಯೇ ಇರುತ್ತದೆ.
ದಹನದ ಎರಡು ದಿನಗಳ ನಂತರ, ಮೂಳೆಗಳನ್ನು ದಹನ ಭೂಮಿಯಿಂದ ತರಲಾಗುತ್ತದೆ. ಆ ಸಮಯದಲ್ಲಿ, ಮೂಳೆಗಳ ಜೊತೆಗೆ, ಹಲ್ಲುಗಳ ಸುಡದ ಭಾಗಗಳನ್ನು ಸಹ ತರಲಾಗುತ್ತದೆ. ಇವುಗಳನ್ನು ಗಂಗಾ ಅಥವಾ ಯಾವುದೇ ಇತರ ಪವಿತ್ರ ನದಿಯಲ್ಲಿ ಬೆರೆಸಲಾಗುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಶ್ರೀ ಹರಿಯ ಪಾದಗಳಲ್ಲಿ ಸ್ಥಾನ ಪಡೆಯಲಿ ಎಂದು ಈ ಕಾರ್ಯಗಳನ್ನು ಮಾಡಲಾಗುತ್ತದೆ. (ಏಜೆನ್ಸೀಸ್)