

ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿದೆ. ಶೂಟಿಂಗ್ ಶುರುವಾದರೂ, ಮೊದಲಿನ ಆ ಖುಷಿ ಇಲ್ಲ. ಇನ್ನು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಂತೂ ಗೊತ್ತಿಲ್ಲದ ವಿಚಾರ. ಓಟಿಟಿ ಒಂದಷ್ಟು ಮನರಂಜನೆ ನೀಡಿದೆ ಎಂಬುದನ್ನು ಬಿಟ್ಟರೆ, ಸ್ಟಾರ್ ನಟರಿಂದ ಯಾವುದೇ ಮನರಂಜನೆ ಸಿಕ್ಕಿಲ್ಲ. ಆದರೂ, ಅಭಿಮಾನಿಗಳಿಗೆ ನಿರಾಸೆಯಾಗಬಾರದೆಂಬ ದೃಷ್ಟಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುತ್ತಿದ್ದಾರೆ. ಒಂದಾದ ಮೇಲೊಂದರಂತೆ ಪೋಸ್ಟ್ ಹಾಕುತ್ತಿದ್ದಾರೆ. ಈ ನಡುವೆ ಟಾಲಿವುಡ್ ನಟ ಮಹೇಶ್ ಬಾಬು ಅಭಿಮಾನಿಗಳಿಗೆ ಕೋರಿಕೆಯೊಂದನ್ನು ಮಾಡಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಸ್ಟಾರ್ ನಟರ ಜನ್ಮದಿನಾಚರಣೆ ನಡೆಯುತ್ತಿಲ್ಲ. ಮನೆಯಲ್ಲಿದ್ದೇ ಆಶೀರ್ವದಿಸಿ ಎಂಬ ಮನವಿ ಮಾಡುತ್ತಿದ್ದಾರೆ. ಇದೀಗ ನಟ ಮಹೇಶ್ ಬಾಬು ಸಹ ಅದೇ ಕೋರಿಕೆ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯಾವುದೇ ಕಾರಣಕ್ಕೆ ಮನೆಯಿಂದ ಹೊರಬರಬೇಡಿ ಎಂದಿದ್ದಾರೆ.
‘ನನ್ನೆನ್ನ ಅಭಿಮಾನಿಗಳಿಗೆ ಒಂದು ಕೋರಿಕೆ. ನಿಮ್ಮ ಆಶೀರ್ವಾದ ಸಿಕ್ಕಿರುವುದಕ್ಕೆ ನಾನು ಧನ್ಯ. ಜಗತ್ತಿನಾದ್ಯಂತ ಕರೊನಾ ಹಾವಳಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅದ್ಧೂರಿ ಜನ್ಮದಿನ ಆಚರಿಸಿಕೊಳ್ಳುವುದು ಸರಿಯಲ್ಲ. ನಮ್ಮ ನಮ್ಮ ಜಾಗೃತೆಯೇ ಈ ಹೊತ್ತಲ್ಲಿ ತುಂಬ ಮಹತ್ವದ್ದು. ದಯಮಾಡಿ ನನ್ನ ಅಭಿಮಾನಿಗಳಿಗೆ ನಾನು ಕೇಳಿಕೊಳ್ಳುವುದೆನೆಂದರೆ, ನನ್ನ ಜನ್ಮದಿನದಂದು ಗುಂಪುಗೂಡಬೇಡಿ. ಆಚರಣೆ ಮಾಡಬೇಡಿ. ನಿಮ್ಮ ಹುಷಾರಲ್ಲಿ ನೀವಿರಿ ಎಂದಿದ್ದಾರೆ.
ಸದ್ಯ ಕಳೆದ ನಾಲ್ಕು ತಿಂಗಳಿಂದ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿರುವ ಮಹೇಶ್ ಬಾಬು ಸದ್ಯ ಸರಕಾರು ವಾರಿ ಪಾಟ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಪರಸುರಾಮ ನಿರ್ದೇಶನ ಮಾಡಲಿದ್ದಾರೆ. (ಏಜೆನ್ಸೀಸ್)