More

    ಸುಶಾಂತ್​ ಹಣ ದುರ್ಬಳಕೆ ಪ್ರಕರಣ; ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿಗೆ ಇಡಿ ಡ್ರಿಲ್​!

    ಕೊನೆಗೂ ಜಾರಿ ನಿರ್ದೇಶನಾಲಯದ ಕರೆಗೆ ಸ್ಪಂದಿಸಿದ ರಿಯಾ ಚಕ್ರವರ್ತಿ ಶುಕ್ರವಾರ ಮುಂಬೈನಲ್ಲಿರುವ ಇಡಿ ಕಚೇರಿಗೆ ತೆರಳಿದ್ದಾರೆ. ಸುಶಾಂತ್​ ಹಣ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದ್ದಂತೆ ತಂದೆ ಕೆಕೆ ಸಿಂಗ್​ ಮನಿ ಲಾಂಡರಿಂಗ್​ ಪ್ರಕರಣ ದಾಖಲಿಸಿದ್ದರು. ಅದರ ಅನುಸಾರ ಆಗಸ್ಟ್ 7ರಂದು ವಿಚಾರಣೆಗೆ ಆಗಮಿಸುವಂತೆ ಇಡಿ ಆದೇಶಿಸಿತ್ತು. ಇದೀಗ ರಿಯಾ ವಿಚಾರಣೆಗೆ ಹಾಜರಾಗಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಎಂಟ್ರಿ: ಯಾರು ಈ ಶ್ರುತಿ ಮೋದಿ?

    ಈ ಸಂಬಂಧ ಪಾಟ್ನಾದ ರಾಜೀವ್​ ನಗರ್​ ಪೊಲೀಸ್​ ಠಾಣೆಯಲ್ಲಿ ಕೆಕೆ ಸಿಂಗ್​ ದೂರು ನೀಡಿದ್ದರು. ರಿಯಾ ಜತೆಗೆ ಸುಶಾಂತ್​ ಸ್ನೇಹಿತ ಸಿದ್ಧಾರ್ಥ್​ ಪಟಾಣಿ ಅವರಿಗೂ ಸಮನ್ಸ್ ಜಾರಿ ಮಾಡಿರುವ ಜಾರಿ ನಿರ್ದೇಶನಾಲಯ, ಅವರನ್ನು ವಿಚಾರಣೆಗೆ ಆಹ್ವಾನಿಸಿದೆ. ಈಗಾಗಲೇ ಸುಶಾಂತ್​ ಮನೆ ಮ್ಯಾನೇಜರ್​ ಮತ್ತು ರಿಯಾ ಅಸೋಸಿಯೇಟ್ ಸ್ಯಾಮ್ಯುಲ್​ ಮಿರಾಂದ್​ ಮತ್ತು ಸುಶಾಂತ್ ಅವರ ಸಿಎ ಸಂದೀಪ್​ ಶ್ರೀಧರ್​ ಅವರನ್ನೂ ಇಡಿ ವಿಚಾರಣೆ ಮಾಡಿದೆ.

    ಈ ಮೊದಲು ಪಾಟ್ನಾದಲ್ಲಿ ದಾಖಲಾಗಿದ್ದ ತನ್ನ ವಿರುದ್ಧದ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡಬೇಕೆಂದು ಕೋರಿ, ಸುಪ್ರೀಂ ಕೋರ್ಟ್ ನಲ್ಲಿ ರಿಯಾ ಅರ್ಜಿ ಸಲ್ಲಿಸಿದ್ದರು. ಅದರ ಉತ್ತರ ಬಂದ ಬಳಿಕ ವಿಚಾರಣೆಗೆ ಹಾಜರಾಗುವ ಬಗ್ಗೆ ಇಡಿಗೆ ಮನವಿ ಮಾಡಿದ್ದರು. ಆದರೆ, ಇತ್ತೀಚೆಗಷ್ಟೇ ಆ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇಡಿಯಿಂದ ಮೇಲ್​ ಮೂಲಕ ಅವರಿಗೆ ಮತ್ತೊಮ್ಮೆ ಸಮನ್ಸ್ ನೀಡಲಾಗಿತ್ತು.

    ಇದನ್ನೂ ಓದಿ: VIDEO: 10 ಸಾವಿರ ರೂ. ನೀಡಲಿಲ್ಲ ಎಂಬ ಕಾರಣಕ್ಕೆ ಫೇಸ್​ಬುಕ್​ ಲೈವ್​ ಬಂದು ಆತ್ಮಹತ್ಯೆಗೆ ಶರಣಾದ ನಟಿ!
    ಜುಲೈ 31ರಂದೇ ರಿಯಾ ವಿರುದ್ಧ ಮನಿ ಲಾಂಡರಿಂಗ್​ ಕೇಸ್​ ದಾಖಲಾಗಿದ್ದು, ಜತೆಗೆ ರಿಯಾ ಆಪ್ತರೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನದಿಂದ ಅವರ ಮೇಲೆಯೂ ದೂರು ದಾಖಲಾಗಿದೆ. ಇತ್ತ ಸಿಬಿಐ ಸಹ ಸುಶಾಂತ್​ ಅವರ ಜತೆ ಕೆಲಸ ಮಾಡಿದ ಮ್ಯಾನೇಜರ್​ಗಳ ವಿರುದ್ಧ ಮತ್ತು ರಿಯಾ ಕುಟುಂಬ ಸದಸ್ಯರ ವಿರುದ್ಧವೂ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದೆ. (ಏಜೆನ್ಸೀಸ್)

    ಮತ್ತೆ ಡೈರೆಕ್ಷನ್​ ಮಾಡೋಕೆ ರೆಡಿಯಾದ ಕಂಗನಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts