

ಸುಶಾಂತ್ ಸಿಂಗ್ ಆತ್ಮಹತ್ಯೆ ಬೆನ್ನಲ್ಲೆ ಸಾಲು ಸಾಲು ಕಲಾವಿದರು ಆತ್ಮಹತ್ಯೆಗೆ ಶರಣಾದರು. ಕನ್ನಡದ ಕಿರುತೆರೆ ಕಲಾವಿದ ಸಹ ನೇಣಿಗೆ ಶರಣಾಗಿದ್ದರು. ಇದೀಗ ಮತ್ತೋರ್ವ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
40 ವರ್ಷದ ಭೋಜಪುರಿ ನಟಿಯಾದ ಅನುಪಮಾ ಪಾಠಕ್ ಮುಂಬೈನ ದಹಿಸರ್ ನಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ ಮೂಲದ ಪೂರ್ಣಿಯಾ ಜಿಲ್ಲೆಯ ಅನುಪಮಾ ಕಳೆದ ಹಲವು ವರ್ಷಗಳಿಂದ ಸಿನಿಮಾ ಇಂಡಸ್ತ್ರಿಯಲ್ಲಿ ತೊಡಗಿಸಿಕೊಂಡಿದ್ದರು. ಟಿವಿ ಶೋಗಳಲ್ಲಿಯೂ ಭಾಗವಹಿಸಿದ್ದರು.
ಇದನ್ನೂ ಓದಿ: ಸುಶಾಂತ್ ಪ್ರಕರಣಕ್ಕೆ ಹೊಸ ತಿರುವು
ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಅನುಪಮಾ ಮೋಸಹೋಗಿದ್ದು, ಆ ವಿಚಾರವನ್ನು ಫೇಸ್ಬುಕ್ನಲ್ಲಿ ಲೈವ್ ಮೂಲಕ ಬಂದು ಶೇರ್ ಮಾಡಿದ್ದರು. ಇದೀಗ ಆ ವಿಡಿಯೋ ಆಧರಿಸಿ ದೂರು ದಾಖಲಾಗಿದ್ದು, ನಿರ್ಮಾಪಕರೊಬ್ಬರು ತಮಗೆ ಕೊಡಬೇಕಾಗಿದ್ದ 10 ಸಾವಿರ ನೀಡದ ಕಾರಣ ಮತ್ತು ಬೈಕ್ ವಾಪಾಸ್ ಮಾಡದ ಮತ್ತೊಬ್ಬರ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಿಂದಿ ಕಿರುತೆರೆಯ ನಟ ಸಮೀರ್ ಶರ್ಮಾ ಆಗಸ್ಟ್ 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಬೆನ್ನೆಲ್ಲೆ ಮತ್ತೋರ್ವ ನಟಿ ನೇಣಿಗೆ ಶರಣಾಗಿದ್ದಾರೆ. (ಏಜೆನ್ಸೀಸ್)