More

    ಕೊಲೆ ತನಿಖೆಯಲ್ಲಿ ವಿಳಂಬ ಆರೋಪ

    ದಾವಣಗೆರೆ: ಜಗಳೂರು ತಾಲೂಕಿನ ಗಾಂಧಿನಗರ ಗ್ರಾಮದ ಡಾಕ್ಯಾನಾಯ್ಕ ಕೊಲೆ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸದೇ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಜ್ಯೋತಿನಾಯ್ಕ ಆರೋಪಿಸಿದರು.
    ಗ್ರಾಮದ ನಿವಾಸಿ ಡಾಕ್ಯಾನಾಯ್ಕ ಫೆ. 6ರಂದು ನಾಪತ್ತೆಯಾಗಿದ್ದರು. ಫೆ.15ರಂದು ಅಣಬೂರು ನರ್ಸರಿ ಸಮೀಪದ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕುರಿ ಸಾಲ ಕೊಡಿಸುವುದಾಗಿ ಮೂವರು ಆರೋಪಿಗಳು ನನ್ನ ತಂದೆಯಿಂದ 1 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದರು. ಸಾಲ ಕೊಡಿಸದ್ದರ ಹಿನ್ನೆಲೆಯಲ್ಲಿ ಹಣ ವಾಪಸ್ ನೀಡುವಂತೆ ಕೇಳಿದರೂ ನೀಡಿರಲಿಲ್ಲ. ಪದೇ ಪದೇ ಹಣ ಕೇಳುವ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ಮೃತನ ಪುತ್ರ ಕುಬೇರನಾಯ್ಕ ದೂರಿದರು.
    ಪೊಲೀಸರು ತನಿಖೆಯಲ್ಲಿ ತಾಂತ್ರಿಕತೆ ಬಳಸುತ್ತಿಲ್ಲ. ಹಣ ಬಲ ಹಾಗೂ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಎಂದು ದೂರಿದ ಅವರು, ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಬಂಜಾರ ಸೇವಾ ಸೇನಾ ರಾಜ್ಯ ಘಟಕದ ಅಧ್ಯಕ್ಷ ಎಸ್. ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts