

ಮುಂಬೈ: ಬಿಟೌನ್ ಸಿನಿಮಾ ರಬ್ ನೇ ಬನಾ ದಿ ಜೋಡಿ ಮೂಲಕ 2008ರಲ್ಲಿ ನಟನೆಗೆ ಪದಾರ್ಪಣೆ ಮಾಡಿದ ನಟಿ ಅನುಷ್ಕಾ ಶರ್ಮಾ ಸದ್ಯ ಸಿನಿಮಾ ರಂಗದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಕುಟುಂಬದ ಜತೆ ಸಮಯ ಕಳೆಯುತ್ತಿದ್ದಾರೆ. ಅನುಷ್ಕಾ ಸಿನಿಮಾ ಜರ್ನಿ ಆರಂಭವಾದ ಸಮಯದಲ್ಲಿ ದೀಪಿಕಾ ಪಡುಕೋಣೆ, ಸೋನಮ್ ಕಪೂರ್ ಬಾಲಿವುಡ್ ಚಿತ್ರಗಳಲ್ಲಿ ಬಿಜಿ ಇದ್ದರೂ ಎಂದರೆ ತಪ್ಪಗಲಾರದು. ದೀಪಿಕಾ ಪಡುಕೋಣೆ 2007ರಲ್ಲಿ ಓಂ ಶಾಂತಿ ಓಂ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರೆ, ಸೋನಮ್ ಕಪೂರ್ ಅವರ ಮೊದಲ ಸಿನಿಮಾ ಸಾವರಿಯಾ ಅದೇ ವರ್ಷ ಬಿಡುಗಡೆ ಕಂಡಿತು.
ಆದರೆ ದೀಪಿಕಾ ಪಡುಕೋಣೆ, ಸೋನಮ್ ಕಪೂರ್ ಬಾಲಿವುಡ್ ಅಂಗಳದಲ್ಲಿ ಹೈಪ್ ಕ್ರಿಯೇಟ್ ಮಾಡಿದಷ್ಟು ಇಮ್ಮ ವಿಚಾರದಲ್ಲಿ ಆಗಲಿಲ್ಲ ಎಂಬ ಪ್ರಶ್ನೆಗೆ ಅನುಷ್ಕಾ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ನನ್ನ ಪ್ರತಿಭೆ ಮತ್ತು ಕೌಶಲದಿಂದ ಫೇಮಸ್ ಆಗವುದು ನನಗೆ ಸಂತೋಷ ನೀಡುತ್ತದೆಯೇ ಹೊರತು ನನ್ನ ಬಟ್ಟೆ ಮತ್ತು ವಿವಾದಗಳಿಂದ ಹೆಸರನ್ನು ಪಡೆಯಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಬಳಿಕ ಅವರು, ನನಗೆ ಗೊತ್ತಿಲ್ಲ ನೀವೆ ಹೇಳಿ. ಮೂರು ವರ್ಷಗಳಲ್ಲಿ ಮೂರು ಹಿಟ್ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ಕೊಟ್ಟಿರುವ ನನಗೆ ಅವರಷ್ಟು ಹೈಪ್ ಏಕೆ ಸಿಗಲಿಲ್ಲ. ಈ ವಿಚಾರ ನೆನಪಿಸಿಕೊಂಡರೆ ನನಗೂ ಆಶ್ವರ್ಯವಾಗುತ್ತದೆ. ನಿಜ ಹೇಳಬೇಕೆಂದರೆ ನನಗೆ ಸಂತೋಷವಾಗಿದೆ. ನನ್ನಲ್ಲಿನ ಪ್ರತಿಭೆಯಿಂದ ನಾನು ಫೇಮಸ್ ಆಗಿದ್ದೇನೆ ಹೊರತು ನಾನು ತೊಡುವ ಬಟ್ಟೆ ಅಥವಾ ವಿವಾದಗಳಿಂದ ಅಲ್ಲ ಎಂದು ಹೇಳಿದರು. ರಬ್ ನೇ ಬನಾ ದಿ ಜೋಡಿ 2008ರಲ್ಲಿ ತೆರೆಕಂಡ ಬಳಿಕ ಬದ್ಮಾಶ್ ಕಂಪನಿ ಮತ್ತು ಬ್ಯಾಂಡ್ ಬಾಜಾ ಬಾರಾತ್‌ನಲ್ಲಿ ನಟಿಸಿದ್ದಾರೆ. ಇವೆರಡೂ 2010ರಲ್ಲಿ ಬಿಡುಗಡೆಯಾದವು.
ನಾನು ಕಂಟೆಂಟ್ ಇಲ್ಲದ ಸಿನಿಮಾಗಳಿಗೆ ಸಹಿ ಹಾಕುವುದಿಲ್ಲ. ವಿಷಯಗಳಿರುವ ಚಿತ್ರಗಳು ನನಗೆ ಸುಲಭವಾಗಿ ಸಿಗುವುದಿಲ್ಲ ಎಂದು ಅರಿತುಕೊಂಡಿದ್ದೇನೆ ಎಂದು ತಿಳಿಸಿದರು. ಅನುಷ್ಕಾ ಶರ್ಮಾ ಬಾಲಿವುಡ್ ಸ್ಟಾರ್ಗಳಾದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್, ಮತ್ತು ವರುಣ್ ಧವನ್ ಸೇರಿ ಹಲವು ನಟರ ಜತೆ ನಟಿಸಿದ್ದಾರೆ.
ಅನುಷ್ಕಾ ಶರ್ಮಾ ಕೊನೆಯದಾಗಿ 2018ರಲ್ಲಿ ಬಿಡುಗಡೆಯಾದ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ದಯ ಅವರ ಮುಂದಿನ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅನುಷ್ಕಾ ಅವರು ಭಾರತೀಯ ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧರಿತ ಮುಂಬರುವ ಕ್ರೀಡಾ ಬಯೋಪಿಕ್ ಚಲನಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗುತ್ತದೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ.(ಎಜೆನ್ಸೀಸ್)