ಚಂದ್ರಬಾಬು ನಾಯ್ಡು ಬಂಧನ; ಟೆಕ್ಕಿಗಳ ಕಾರು ರ‍್ಯಾಲಿಗೆ ಅನುಮತಿ ನಿರಾಕರಿಸಿದ​ ಪೊಲೀಸರು

Untitled design - 2023-09-24T140324.351
Published on

ಆಂಧ್ರಪ್ರದೇಶ: ಬಹುಕೋಟಿ ಕೌಶಲಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಎನ್. ಚಂದ್ರಬಾಬು ನಾಯ್ಡು ಜೈಲು ಪಾಲಾದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ಟಾರ್​ ನಟ ಪವನ್​ ಕಲ್ಯಾಣ್​ ಸೇರಿದಂತೆ ಹಲವರು ಹಲವು ರೀತಿಯಲ್ಲಿ ಪ್ರತಿಭಟನೆಗೆ ನಡೆಸಿದ್ದಾರೆ.

ಈ ವೇಳೆ ಸಾಫ್ಟ್​ವೇರ್​ ಉದ್ಯೋಗಿಗಳು ಒಗ್ಗೂಡಿ 'ಚಲೋ ರಾಜಮಂಡ್ರಿ' ಕಾರು ರ‍್ಯಾಲಿ ನಡೆಸುತ್ತೇವೆ ಎಂದು ಕೇಳಿದ ಅನುಮತಿಗೆ ಇದೀಗ ಹೈದರಾಬಾದ್​​ ಪೊಲೀಸರು ನಿರಾಕರಿಸಿದ್ದಾರೆ.

ಆಂಧ್ರಪ್ರದೇಶದ ರಾಜಮಂಡ್ರಿಗೆ ಹೈದರಾಬಾದ್‌ನಿಂದ ಐಟಿ ಉದ್ಯೋಗಿಗಳು ಇಂದು ಬೃಹತ್​ ಕಾರು ರ‍್ಯಾಲಿಯನ್ನು ನಡೆಸುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿರುವ ಕಾರಣ ನಾಲ್ಕಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಈ ಕಾರಣ ರ‍್ಯಾಲಿಗೆ ಅನುಮತಿ ಕೊಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

"ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಬಂಧನವಾಗಿದೆ. ಚಂದ್ರಬಾಬು ಅವರನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು ಹೈದರಾಬಾದ್‌ನಿಂದ ರಾಜಮಂಡ್ರಿಗೆ ಬೃಹತ್​ ಕಾರು ರ‍್ಯಾಲಿಯನ್ನು ಕೈಗೊಳ್ಳಲು ಚಿಂತನೆ ನಡೆಸಿದ್ದರು. ಈ ಮಾಹಿತಿ ತಿಳಿದ ಬೆನ್ನಲ್ಲೇ ಅವರಿಗೆ ಅನುಮತಿ ನಿರಾಕರಿಸಲಾಗಿದೆ. ವಿಜಯವಾಡ ನಗರದಲ್ಲಿಯೂ ಸೆಕ್ಷನ್ 144 ವಿಧಿಸಲಾಗಿದೆ" ಎಂದು ಜಿಲ್ಲಾ ಎಸಿಪಿ ರಮೇಶ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net