ಆನ್​ಲೈನ್​ ಹೂಡಿಕೆಯಲ್ಲಿ ಹೆಚ್ಚಿನ ಲಾಭ..ಮಹಿಳೆಗೆ 13.26 ಕೋಟಿ ಟೋಪಿ ಹಾಕಿದ ಸೈಬರ್ ಕ್ರಿಮಿನಲ್ಸ್​!

cyber crime
Published on

ಹೈದರಾಬಾದ್: ಆನ್‌ಲೈನ್ ಹೂಡಿಕೆಯಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ ಸೈಬರ್ ಕ್ರಿಮಿನಲ್‌ಗಳು ಹೈದರಾಬಾದ್​ನ ಮಹಿಳೆಯೊಬ್ಬರಿಂದ 13.26 ಕೋಟಿ ರೂಪಾಯಿ ದೋಚಿದ್ದಾರೆ. ಈ ಪ್ರಮಾಣದಲ್ಲಿ ವಂಚನೆಗೊಳಗಾದ ದೇಶದ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ.

ಸಂತ್ರಸ್ತೆ ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ನಗರದ 43 ವರ್ಷದ ಮಹಿಳೆ ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ, ಅದರಲ್ಲಿದ್ದ ವಾಟ್ಸಾಪ್ ನಂಬರ್ ನಲ್ಲಿ ಚಾಟ್ ಮಾಡಿದ್ದಾಳೆ. ಕೂಡಲೇ ಲೈನ್‌ನಲ್ಲಿ ಬಂದ ಅಪರಿಚಿತರು ಆಕೆಯನ್ನು 'ಜಿ5 ಬ್ಲ್ಯಾಕ್ ರಾಕ್ ಬ್ಯುಸಿನೆಸ್ ಸ್ಕೂಲ್' ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದಾರೆ. ನೀವು ಬ್ಲ್ಯಾಕ್ ರಾಕ್ ಬಿಸಿನೆಸ್ ಸ್ಕೂಲ್ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭವನ್ನು ಪಡೆಯುತ್ತೀರಿ ಎಂದು ನಂಬಿಸಿದ್ದಾರೆ. ಹಾಗಾಗಿ ಪ್ರಾರಂಭದಲ್ಲಿ ಮಹಿಳೆ ಅಲ್ಪ ಮೊತ್ತವನ್ನು ಹೂಡಿದ್ದಾರೆ. ಕ್ರಿಮಿನಲ್​ಗಳು ಭಾರಿ ಲಾಭ ನೀಡಿದ್ದಾರೆ. ಇದಾದ ನಂತರ ಆಕೆಯನ್ನು ಮತ್ತೊಂದು ವಾಟ್ಸಾಪ್ ಗ್ರೂಪ್ 'ಜಿ5 ವಿಐಪಿ ಗ್ರೂಪ್​ 926' ಗೆ ಸೇರಿಸಿಕೊಂಡಿದ್ದಾರೆ.

ನಂತರ ವಾಟ್ಸಾಪ್ ಮೂಲಕ ಆಕೆಗೆ ಲಿಂಕ್ ಕಳುಹಿಸಲಾಗಿದೆ. ಆಕೆ ಲಾಗ್ ಇನ್ ಮಾಡಿ ತನ್ನ ಹೂಡಿಕೆಯ ಲಾಭವನ್ನು ಹಿಂತೆಗೆದುಕೊಂಡಿದ್ದಾಳೆ. ಹಾಗಾಗಿ ಮೂರನೇ ಬಾರಿ 13.26 ಕೋಟಿ ರೂ. ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ತಕ್ಷಣವೇ ಸೈಬರ್ ಅಪರಾಧಿಗಳು ಹಿಂಪಡೆಯುವ ಆಯ್ಕೆಯನ್ನು ಮುಚ್ಚಿದ್ದಾರೆ.

ಇದಾದ ನಂತರ ಮಹಿಳೆಗೆ ಯಾರೂ ಸ್ಪಂದಿಸದ ಕಾರಣ ಮೋಸ ಹೋಗಿರುವುದನ್ನು ಅರಿತು ಸಂತ್ರಸ್ತೆ ಬುಧವಾರ ಹೈದರಾಬಾದ್​ನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net