ಖಾಸಗಿ ಕ್ಷಣದ ವಿಡಿಯೋ ಮಾಡಲು ಮುಂದಾದ ಪತಿ... ನಿರಾಕರಿಸಿದ ಹೆಂಡ್ತಿಗೆ ಗಂಡ ಮಾಡಿದ್ದೇನು? | Private

dk - 2025-06-28T132021.358
Published on

Private: ತನ್ನ ಫೋನ್‌ನಲ್ಲಿ ಖಾಸಗಿ ವಿಡಿಯೋ ರೆಕಾರ್ಡ್ ಮಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಮಧ್ಯಪ್ರದೇಶದ ಉಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಪುಲೆಹ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಲ್ಲಾಪುರ ನಿವಾಸಿ ಗೋಲ್ಡಿ ಮೃತೆ ಎಂದು ಗುರುತಿಸಲಾಗಿದೆ.

ಪ್ರಕರಣ ಏನು..?

ಪತಿ ಜಬರ್ ಸಿಂಗ್ ಜಾತವ್ ಕುಡಿದು ಮನೆಗೆ ತಡರಾತ್ರಿ ಹೋಗಿದ್ದಾನೆ. ಅವನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಆದರೆ, ಕುಡಿದ ಮತ್ತಿನಲ್ಲಿದ್ದ ಪತಿಯನ್ನು ಗಮನಿಸಿದ ಹೆಂಡತಿ ಅದಕ್ಕೆ ನಿರಾಕರಿಸಿ ದೂರ ಸರಿದು ಮಲಗಿದ್ದಾಳೆ. ಆದರೆ, ಜಬರ್ ಸಿಂಗ್ ತನ್ನ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ ವಿಡಿಯೋ ರೆಕಾರ್ಡಿಂಗ್ ಮಾಡಲು ಪ್ರಾರಂಭಿಸಿದನು. ಅಲ್ಲದೇ, ಬಲವಂತವಾಗಿ ದೈಹಿಕ ಸಂಬಂಧ ಹೊಂದಲು ಪ್ರಯತ್ನ ಮಾಡಿದ್ದಾನೆ. ಈ ಕ್ಷಣದಲ್ಲಿ ಆಕೆ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಪೋಲಿಸ್​ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ಕೋಪಗೊಂಡ ಜಬರ್ ಸಿಂಗ್ ಕುಡಿದ ಮತ್ತಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ರಾತ್ರಿ ಎಲ್ಲ ಶವದ ಪಕ್ಕದಲ್ಲಿಯೇ ಮಲಗಿದ್ದಾನೆ. ಬೆಳಗ್ಗೆ ಎದ್ದ ಇತ ಗಾಬರಿಯಾಗಿದ್ದಾನೆ. ಭಯಭೀತಿಯಿಂದ ಪೊಲೀಸ್​ ಠಾಣೆಗೆ ಹೊಡಿದ ಇತ ಕೊಲೆ ಮಾಡಿದ ಬಗ್ಗೆ ಠಾಣೆಯಲ್ಲಿ ವಿವರಿಸಿದ್ದಾನೆ. ಮನೆ ಬಂದ ಪೊಲೀಸರಿಗೆ ಕೊಲೆ ಆಗಿರುವ ಶವ ಬಿದ್ದಿರುವುದು ಕಂಡಿದೆ. ಬಳಿಕ ಇತನ್ನು ಬಂಧಿಸಿದ್ದಾರೆ.

ಮೃತರ ಸಹೋದರ ದೀಪು ಜಾತವ್, ಜಬರ್ ಸಿಂಗ್ ಜೊತೆಗೆ ತನ್ನ ತಂದೆಯೂ ತನ್ನ ಸಹೋದರಿಯ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಸಹೋದರಿಯ ಒಂದು ಬೆರಳು ಕತ್ತರಿಸಲ್ಪಟ್ಟಿದೆ ಮತ್ತು ಆಕೆಯ ಮುಖದ ಮೇಲೆ ಗಾಯದ ಗುರುತುಗಳಿವೆ ಎಂದು ದೀಪು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net