

Tamilnadu: ಆರು ತಿಂಗಳ ಹಿಂದೆ ಪತ್ನಿ ತನ್ನನ್ನು ತೊರೆದು ಬೇರೊಬ್ಬನ ಜೊತೆ ಓಡಿ ಹೋದ ಕಾರಣ ಖಿನ್ನತೆಗೊಳಗಾದ ಪತಿ ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ಭೀಕರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಘಟನೆ ಶುಕ್ರವಾರ(ಅ. 10) ತಮಿಳುನಾಡಿನ ತಂಜಾವೂರ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ವಿ ಓವಿಯಾ (12), ಕೀರ್ತಿ (8) ಮತ್ತು ಈಶ್ವರನ್ (5) ಎಂದು ಗುರುತಿಸಲಾಗಿದೆ. ಆರೋಪಿ ಗೋಪಾಲಸಮುದ್ರಂ ಗ್ರಾಮದ ಎಸ್. ವಿನೋದ್‌ಕುಮಾರ್. ಮಡುಕೂರಿನ ಹೋಟೆಲ್‌ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಕೆಲಸ ಮುಗಿಸಿ ಮನೆಗೆ ಬಂದು ಮಚ್ಚಿನಿಂದ ಮಕ್ಕಳನ್ನು ಹಲ್ಲೆ ಮಾಡಿ, ನಂತರ ಮಡುಕೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಈ ಕುರಿತು ಮಾತನಾಡಿರುವ ಪೊಲೀಸರು, ಆರೋಪಿ ವಿನೋದ್‌ಕುಮಾರ್ ಮದುವೆಯಾಗಿ 10 ವರ್ಷಗಳಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ವಾಸಿಸಲು ಅವನ ಪತ್ನಿ ಬಿಟ್ಟು ಹೋಗಿದ್ದಳು. ಅಂದಿನಿಂದ ಆರೋಪಿ ಪ್ರತಿದಿನ ಮದ್ಯ ಸೇವಿಸಿ ಮಕ್ಕಳಿಗೆ ಬೈದು ಹಲ್ಲೆ ಮಾಡುತ್ತಿದ್ದ. ನಿನ್ನೆ ರಾತ್ರಿ ಅದೇ ರೀತಿಯಲ್ಲಿ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಈ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)