ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ! ಸ್ಥಳದಿಂದ ಓಡಿಹೋದ ಗಂಡ ಕಡೆಗೂ ಪೊಲೀಸರ ಬಲೆಗೆ | Murder

husband murder
Published on

ಕಲಬುರಗಿ: ಹೆಂಡತಿ ಜತೆ ತೀವ್ರ ವಾಗ್ವಾದಕ್ಕಿಳಿದ ಪತಿ (Husband), ಏಕಾಏಕಿ ಸಿಟ್ಟಿಗೆದ್ದು ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ (Murder) ಘಟನೆ ಕಲಬುರಗಿ ಜಿಲ್ಲೆಯ ಹೊರವಲಯದ ಶಹಬಾದ್ ರಸ್ತೆಯ ಇಟ್ಟಿಗೆ ಭಟ್ಟಿಯಲ್ಲಿ ಸಂಭವಿಸಿದೆ.

ಮೃತ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ಬಂಧಿತನಾದ ಆರೋಪಿ ಗಂಡನನ್ನು ವಕೀಲ್ ರಾಥೋಡ್​ ಎಂದು ವರದಿ ಉಲ್ಲೇಖಿಸಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕೂಡಲಹಂಗರಗಾ ಗ್ರಾಮದ‌ ನಿವಾಸಿಯಾದ ಪ್ರಿಯಾಂಕಾ, ಕಳೆದ ಹತ್ತು ವರ್ಷಗಳ ಹಿಂದೆ ರಾಥೋಡ್​ನೊಂದಿಗೆ ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಪದೇ ಪದೇ ಇಬ್ಬರ ನಡುವೆ ಜಟಾಪಟಿ ನಡೆಯುತ್ತಿತ್ತು. ನಿನ್ನೆ (ಅ.02) ರಾತ್ರಿ ಇಬ್ಬರು ಕಲಬುರಗಿ ಹೊರವಲಯದ ಶಹಬಾದ್ ರಸ್ತೆಯ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ನಿನ್ನೆ ರಾತ್ರಿ ಗಂಡ-ಹೆಂಡತಿ ಇಬ್ಬರು ಸೇರಿ ಮದ್ಯಪಾನ ಮಾಡಿದ್ದರು ಎನ್ನಲಾಗಿದ್ದು, ಮದ್ಯೆ ಸೇವಿಸಿದ ಬಳಿಕ ದಂಪತಿಗಳ ಮಧ್ಯೆ ಗಲಾಟೆ ಶುರುವಾಗಿ,  ತೀವ್ರ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅಲ್ಲೇ ಇದ್ದ ಇಟ್ಟಿಗೆ ಕೈಗೆತ್ತಿಕೊಂಡ ಪತಿ, ಹೆಂಡತಿಯ ತಲೆಗೆ ಬಲವಾಗಿ ಹೊಡೆದು, ಹತ್ಯೆಗೈದಿದ್ದಾನೆ. ಕೊಲೆ ಮಾಡಿದ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದ ಪತಿ ವಕೀಲ್​ ರಾಥೋಡ್​ನನ್ನು ಇದೀಗ ಸ್ಥಳೀಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net