

ಪುಣೆ: ಪತಿಯೇ ಪತ್ನಿಯನ್ನು ವೇಶ್ಯಾವಾಟಿಕೆಗಾಗಿ ಬಲವಂತಪಡಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು. ಈ ಘಟನೆಯು ಮಹಾರಾಷ್ಟ್ರದ ಪುಣೆಯ ಹಡಪ್ಸರ್ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆ ತನ್ನ ಪತಿಯೊಂದಿಗೆ ಉಂಡ್ರಿಯಲ್ಲಿ ವಾಸವಾಗಿದ್ದು, ಆತ ಹಣ ಸಂಪಾದಿಸಲು ಉತ್ಸುಕನಾಗಿದ್ದನು. ಈ ದುರಾಸೆಯಿಂದ ಇಬ್ಬರು ಸ್ನೇಹಿತರ ನೆರವಿನಿಂದ ಪತ್ನಿಯನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಗಂಡನ ಹೆಸರು ಅಕ್ಷಯ್(25) ಈ ಸಂಬಂಧ ಸಂತ್ರಸ್ತೆಯ ಪತ್ನಿ ತನ್ನ ಪತಿ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತಿಯ ಸ್ನೇಹಿತರಾದ ಆದಿತ್ಯ ಗೌತಮ್ ಮತ್ತು ಸುಜಿತ್ ಎಂಬಾತನನ್ನು ಬಂಧಿಸಿದ್ದಾರೆ.
ಪತಿ ಹಣಕ್ಕಾಗಿ ಪತ್ನಿಗೆ ಥಳಿಸಿ ವೇಶ್ಯಾವಾಟಿಕೆ ನಡೆಸುವಂತೆ ಹೇಳಿದ್ದು, ತನ್ನ ಇಬ್ಬರು ಸ್ನೇಹಿತರಿಂದ ತಲಾ ಮೂರು ಸಾವಿರ ರೂಪಾಯಿ ಪಡೆದು ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಗಂಡನ ಸ್ನೇಹಿತರು ಅಸಹಜವಾದ ಸಂಭೋಗವನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಮಹಿಳೆ ರಸ್ತಾ ಪೇಠ್ ಪ್ರದೇಶದ ಮೂಲಕ ಹೋಗುತ್ತಿದ್ದಾಗ ಆಕೆಯ ಗಂಡನ ಸ್ನೇಹಿತರು ಆಕೆಯನ್ನು ಅಡ್ಡಗಟ್ಟಿ, ಆಕೆಗೆ ನಿಂದಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಗಾಬರಿಗೊಂಡ ಮಹಿಳೆ ಪೊಲೀಸ್ ಠಾಣೆಗೆ ಬಂದು ತನ್ನ ಪತಿ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅದರಂತೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮೂವರನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್)