ಮದುವೆ ಮನೆಗೆ ಸಂಬಂಧಿಕರೊಂದಿಗೆ ನುಗ್ಗಿದ ಮಹಿಳೆ: ತದನಂತರ ಕಳಚಿ ಬಿತ್ತು ವರನ ಮುಖವಾಡ..

criminal marriage
Published on

ಅಹ್ಮದ್‌ನಗರ: ಮೊದಲ ಪತ್ನಿ ಬದುಕಿರುವಾಗಲೇ ಆಕೆಯಿಂದ ವಿಚ್ಛೇದನವನ್ನು ಪಡೆಯದೇ ಎರಡನೇ ಮದುವೆಯಾಗುತ್ತಿದ್ದ ವರನಿಗೆ ಮೊದಲ ಪತ್ನಿ ತಕ್ಕ ಪಾಠ ಕಲಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್​ನಗರದಲ್ಲಿ ನಡೆದಿದೆ.

ವಿಶಾಲ್ ಪವಾರ್ ಈಗಾಗಲೇ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ವಿಶಾಲ್ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗುತ್ತಿದ್ದ. ಛತ್ರಪತಿ ಸಂಭಾಜಿ ನಗರದಲ್ಲಿ ವಾಸವಾಗಿರುವ ಪತ್ನಿಗೆ ಪತಿಯ ಎರಡನೇ ಮದುವೆ ವಿಷಯ ತಿಳಿದಿದ್ದು, ಹೆಂಡತಿ ತಕ್ಷಣ ತನ್ನ ತಂದೆ ತಾಯಿ ಮತ್ತು ಇತರ ಸಂಬಂಧಿಕರೊಂದಿಗೆ ಮದುವೆಗೂ ಮುನ್ನವೇ ಮದುವೆ ಮಂಟಪದಲ್ಲಿ ಕಾಣಿಸಿಕೊಂಡಿದ್ದಾಳೆ.

ಆ ವೇಳೆ ಮೊದಲ ಪತ್ನಿಯು ರಾದ್ಧಾಂತ ನಡೆಸಿದ್ದು, ವರನ ಸಲುವಾಗಿ ಮೊದಲ ಪತ್ನಿ ಮತ್ತು ಎರಡನೇ ಪತ್ನಿ ಕಡೆಯವರು ಜಗಳವಾಡಿದ್ದಾರೆ. ಈ ನಡುವೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೊದಲ ಪತ್ನಿ ಹಾಗೂ ಆಕೆಯ ಪತಿಯನ್ನು ಠಾಣೆಗೆ ಕರೆತಂದಿದ್ದಾರೆ.
ಪೊಲೀಸ್ ಠಾಣೆಗೆ ಬಂದ ನಂತರ ವಿಶಾಲ್ ಪವಾರ್ ಅವರ ಮೊದಲ ಪತ್ನಿ ಪ್ರಕರಣ ದಾಖಲಿಸಿದ್ದು, ಕಾನೂನು ಪ್ರಕಾರ ವಿಚ್ಛೇದನ ಇಲ್ಲದಿದ್ದರೂ, ಗಂಡು ಮಗು ಇದ್ದರೂ ಸಹ ಪತಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮತ್ತೊಬ್ಬ ಮಗಳ ಜತೆ ಮದುವೆ ಕಾರ್ಯಕ್ರಮ ಏರ್ಪಡಿಸಿದ್ದರು. ಆದರೆ, ಸಕಾಲಕ್ಕೆ ಸ್ಥಳಕ್ಕೆ ತಲುಪಿದ್ದರಿಂದ ಮದುವೆ ಸಮಾರಂಭ ಸ್ಥಗಿತಗೊಂಡಿದೆ.(ಏಜೆನ್ಸೀಸ್)

chewed-ear-and-finger-too-at-bihar

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net