ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದ ಇಬ್ಬರು ಮಹಿಳೆಯರು: ಕೃತ್ಯದ ಹಿಂದಿತ್ತು ಪರಿಚಿತ ಪುರುಷನ ಕೈವಾಡ?

police
ಸಾಂದರ್ಭಿಕ ಚಿತ್ರ
Published on

ಅಹಮದ್‌ನಗರ: ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿ ಹಾಗೂ ಅತ್ತೆಯನ್ನು ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ರಾಹುರಿಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಕ್ಕು ಅಡ್ಡ ಬಂದರೆ ಅಪಶಕುನವೆಂದು ಕಾರು ನಿಲ್ಲಿಸಿದ ಕಳ್ಳರು: ಆಮೇಲೆ ನಡೆದಿದ್ದು ಮಾತ್ರ..

ಮೃತರನ್ನು ಪತ್ನಿ ನೂತನ್(23) ಮತ್ತು ಸುರೇಖಾ (45) ಎಂದು ಗುರುತಿಸಲಾಗಿದ್ದು, ಜೋಡಿ ಕೊಲೆಯಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಾಗರ್ ಸುರೇಶ ಸಾಬಳೆ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಆತ ತನ್ನ ಮನೆಯಲ್ಲಿ ಮಲಗಿದ್ದ ಪತ್ನಿ ಮತ್ತು ಅತ್ತೆಯ ತಲೆಗೆ ಕಬ್ಬಿಣದ ರಾಡ್​​ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಮರುದಿನ ನೂತನ್‌ನ ಸಹೋದರ ಆಕೆಯ ಮನೆಗೆ ಬಂದಿದ್ದು, ಆತ ಆಘಾತಕಾರಿ ಘಟನೆಯನ್ನು ಗಮನಿಸಿ ಘಟನೆಯ ಬಗ್ಗೆ ರಾಹುರಿ ಪೊಲೀಸರಿಗೆ ತಿಳಿಸಿದ್ದಾನೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲಿಸರು, ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಾಗರ್ ಸುರೇಶ ಸಾಬಲೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net