ಇಂಗ್ಲಿಷ್​ ಬರಲ್ಲ, ಮೈಬಣ್ಣ ಒಪ್ಪಲು ಸಾಧ್ಯವಿಲ್ಲ! ಪತ್ನಿಯನ್ನು ಬಲವಂತವಾಗಿ ಸಾವಿಗೆ ದೂಡಿದ ಪತಿ ಬಂಧನ | Husband

ವಿಜಯವಾಣಿ - 2025-01-20T200215.673
Published on

ಕಣ್ಣೂರು: ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನೂ ಒಂದು ವರ್ಷವು ಪೂರ್ಣಗೊಂಡಿಲ್ಲ. ಅಷ್ಟರೊಳಗೆ ಹೆಂಡತಿಯನ್ನು ತನ್ನ ಚುಚ್ಚು ಮಾತುಗಳಿಂದ ಬಲವಂತವಾಗಿ ಸಾವಿಗೆ ದೂಡಿದ ಪಾಪಿ ಪತಿಯನ್ನು ಕಣ್ಣೂರಿನ ಕೊಂಡೊಟ್ಟಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಂಡೊಟ್ಟಿಯಲ್ಲಿ ಆಕೆಯ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಂಡೊಟ್ಟಿ ಪೊಲೀಸರು ಕಿಳಿಸ್ಸೆರಿ ಮೂಲದ ಅಬ್ದುಲ್ ವಾಹಿದ್​ನನ್ನು ಕಣ್ಣೂರು ಏರ್​ಪೋರ್ಟ್​ನಲ್ಲಿ ಬಂಧಿಸಿದ್ದಾರೆ. ಮಗಳಿಗೆ ಇಂಗ್ಲಿಷ್​ ಮಾತನಾಡಲು ಬರುವುದಿಲ್ಲ. ಮೈಬಣ್ಣ ನೋಡಲು ಚೆನ್ನಾಗಿಲ್ಲ ಎಂದು ದೂರವಾಣಿ ಕರೆಯಲ್ಲಿ ಪತ್ನಿಗೆ ಆಗಾಗ್ಗೆ ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಿಳೆಯ ಪೋಷಕರು ವಾಹಿದ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿದೇಶದಲ್ಲಿದ್ದ ವಾಹಿದ್​ಗಾಗಿ ಲುಕೌಟ್ ನೋಟಿಸ್ ಹೊರಡಿಸಿದ್ದ ಪೊಲೀಸ್​ ಇಲಾಖೆ, ಆತನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

ಮೃತ ಮಹಿಳೆ ಶಹಾನಾ ಮುಮ್ತಾಜ್ (19), ಕೊಂಡೊಟ್ಟಿ ಮೂಲದವರು ಎನ್ನಲಾಗಿದೆ. ಪತಿ ಮತ್ತು ಆಕೆಯ ಅತ್ತೆ, ಮಾವ ನೀಡಿದ ಮಾನಸಿಕ ಹಿಂಸೆಯಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ನೀಡಿದ್ದ ದೂರಿನ ಮೇರೆಗೆ ಕೊಂಡೊಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊರಯೂರು ಮೂಲದ ಆಕೆಯ ಪತಿ ಅಬ್ದುಲ್ ವಾಹಿದ್ ಮತ್ತು ಆಕೆಯ ಪೋಷಕರ ವಿರುದ್ಧ ಸದ್ಯ ದೂರು ದಾಖಲಾಗಿದೆ. ಶಹಾನಾ ಮತ್ತು ವಾಹಿದ್ ಕಳೆದ ವರ್ಷ ಮೇ 27ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ಒಂದು ತಿಂಗಳ ನಂತರ, ವಾಹಿದ್ ವಿದೇಶಕ್ಕೆ ತೆರಳಿದ ಎಂದು ವರದಿಯಾಗಿದೆ.

ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ವಾಹಿದ್, ಶಹಾನಾಳ ಮೈಬಣ್ಣದ ಕಾರಣಕ್ಕೆ ಫೋನ್‌ನಲ್ಲಿ ಆಗಾಗ್ಗೆ ಆಕೆಯನ್ನು ಅವಮಾನಿಸಿ, ಮನಸ್ಸಿಗೆ ಘಾಸಿ ಮಾಡುತ್ತಿದ್ದ. ಮುಮ್ತಾಜ್ ಆಕರ್ಷಕ ಮೈಬಣ್ಣ ಹೊಂದಿಲ್ಲ, ಇಂಗ್ಲಿಷ್​ ಮಾತನಾಡಲು ಬರಲ್ಲ ಎಂದು ಮಾನಸಿಕವಾಗಿ ಹಿಂಸಿಸುತ್ತಿದ್ದ. ಇದೇ ಕಾರಣದಿಂದಾಗಿ ವಿಚ್ಛೇದನ ನೀಡುವಂತೆ ಹಲವು ಬಾರಿ ಒತ್ತಾಯಿಸಿದ್ದ ಯುವತಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net