ರಷ್ಯಾದಿಂದ ಉಕ್ರೇನ್‌ ಮೇಲೆ ನೂರಾರು ಡ್ರೋನ್‌ ದಾಳಿ; ಆರು ಮಂದಿ ಸಾವು| missile

Russia ICBM
Published on

ಕೀವ್: ಉಕ್ರೇನ್ ಮೇಲೆ ರಷ್ಯಾ ನೂರಾರು ಡೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದು, ನಿನ್ನೆ (11) ರಾತ್ರಿ ಹಾಗೂ ಇಂದು (12) ಬೆಳಗ್ಗೆ ನಡೆದ ದಾಳಿಯಲ್ಲಿ ಒಟ್ಟು ಆರು ಜನ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮತ್ತೊಂದೆಡೆ ಉಕ್ರೇನ್‌ನ ಪಶ್ಚಿಮ ಎಲ್ವಿವ್ ಪ್ರದೇಶದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈಶಾನ್ಯ ಉಕ್ರೇನ್‌ನ ಖಾರ್ಕಿವ್‌ನಲ್ಲಿ ಎಂಟು ಡ್ರೋನ್‌ಗಳು ಮತ್ತು ಎರಡು ಕ್ಷಿಪಣಿಗಳು ನಗರದ ಮೇಲೆ ದಾಳಿ ಮಾಡಿ, ಮೂವರು ಗಾಯಗೊಂಡಿದ್ದಾರೆ ಎಂದು ಮೇಯರ್ ಇಹೋರ್ ತೆರೆಖೋವ್ ಮಾಹಿತಿ ನೀಡಿದ್ದಾರೆ.

ರಷ್ಯಾ ಪಡೆಗಳು ರಾತ್ರಿಯಿಡೀ ನೈಋತ್ಯ ಉಕ್ರೇನ್‌ನ ಚೆರ್ನಿವ್ಟ್ಸಿ ಪ್ರದೇಶದ ಬುಕೊವಿನಾ ಪ್ರದೇಶದ ಮೇಲೆ ನಾಲ್ಕು ಡ್ರೋನ್‌ಗಳು ಮತ್ತು ಒಂದು ಕ್ಷಿಪಣಿಯೊಂದಿಗೆ ದಾಳಿ ನಡೆಸಿದಾಗ, ಡ್ರೋನ್‌ನ ಅವಶೇಷಗಳು ಬಿದ್ದ ಕಾರಣ ಇಬ್ಬರು ಸಾವನ್ನಪ್ಪಿದರು ಮತ್ತು 14 ಜನರು ಗಾಯಗೊಂಡರು ಎಂಬ ವರದಿಯಾಗಿದೆ.

(ಏಜೆನ್ಸೀಸ್)

ರಾತ್ರಿಯಿಡೀ ರಷ್ಯಾ 597 ಡ್ರೋನ್‌ಗಳು ಮತ್ತು ಡಿಕಾಯ್‌ಗಳನ್ನು ಮತ್ತು 26 ಕ್ರೂಸ್ ಕ್ಷಿಪಣಿಗಳನ್ನು ಉಕ್ರೇನ್‌ನ ಮೇಲೆ ಹಾರಿಸಿದೆ ಎಂದು ಉಕ್ರೇನ್‌ನ ವಾಯುಪಡೆ ತಿಳಿಸಿದೆ. ಇವುಗಳಲ್ಲಿ 319 ಡ್ರೋನ್‌ಗಳು ಮತ್ತು 25 ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎನ್ನಲಾಗಿದೆ. ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಉಕ್ರೇನ್‌ನ 33 ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net