ಟೆನ್ನಿಸ್ ಆಟಗಾರ್ತಿ ರಾಧಿಕಾ ಕೊಲೆ ಪ್ರಕರಣ; ತಂದೆ ದೀಪಕ್ ಯಾದವ್​ಗೆ 14 ದಿನಗಳ ನ್ಯಾಯಾಂಗ ಬಂಧನ| radhika-yadav

radhika yadav
Published on

ಚಂಡೀಗಢ : ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ತಂದೆ ದೀಪಕ್ ಯಾದವ್‌ನನ್ನು ಇಂದು (12) ಗುರುಗ್ರಾಮ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

51 ವರ್ಷದ ದೀಪಕ್ ತನ್ನ ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಬಳಿಕ ಶುಕ್ರವಾರದಿಂದ ವಿಚಾರಣೆಗಾಗಿ ಒಂದು ದಿನದ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿತ್ತು. ಗುರುವಾರ ಬೆಳಗ್ಗೆ 10.30 ರ ಸುಮಾರಿಗೆ ಗುರುಗ್ರಾಮದ ಸುಶಾಂತ್ ಲೋಕ್ -2 ರ ಬ್ಲಾಕ್-ಜಿ ಯಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ತನ್ನ ಮಗಳಾದ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಅವರ ಬೆನ್ನಿಗೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ರಾಧಿಕಾ ಯಾದವ್‌ರನ್ನು ಕೊಂದಿದ್ದೇಕೆ?

ಗುರುವಾರ (ಜುಲೈ 10) ಗುರುಗ್ರಾಮ್‌ನ ಸುಶಾಂತ್ ಲೋಕ್ ಪ್ರದೇಶದಲ್ಲಿರುವ ಕುಟುಂಬದ ಮನೆಯಲ್ಲಿ ರಾಧಿಕಾ ಅವರನ್ನು ಅವರ ತಂದೆ ಗುಂಡು ಹಾರಿಸಿ ಕೊಂದರು. ಎರಡು ವರ್ಷಗಳ ಹಿಂದೆ ಆದ ಗಾಯದಿಂದಾಗಿ ಟೆನಿಸ್ ವೃತ್ತಿಜೀವನದಿಂದ ದೂರ ಉಳಿದಿದ್ದ ರಾಧಿಕಾ, ಸೋಶಿಯಲ್ ಮೀಡಿಯಾ ಇನ್ನ ಯೆನ್ಸರ್ ಆಗಲು ಬಯಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಆಗಾಗ ಇನ್ ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ರಚಿಸಿ, ಅಪ್‌ಲೋಡ್ ಮಾಡುತ್ತಿದ್ದರು.

(ಏಜೆನ್ಸೀಸ್)

ತಮ್ಮ ಮಗಳು ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ತಂದೆ ದೀಪಕ್ ಅಸಮಾಧಾನಗೊಂಡಿದ್ದರು ಮತ್ತು ರೀಲ್‌ಗಳನ್ನು ಅಳಿಸಲು ಸಹ ಕೇಳಿಕೊಂಡಿದ್ದರು. ಇದರ ನಡುವೆ ರಾಧಿಕಾ ಟೆನಿನ್ ಅಕಾಡೆಮಿ ನಡೆಸುತ್ತಿರುವುದು ಕೂಡ ದೀಪಕ್‌ಗೆ ಇಷ್ಟವಿರಲಿಲ್ಲ. ಆಕೆಯ ಆರ್ಥಿಕ ಸ್ವಾತಂತ್ರ್ಯ ಮತ್ತು ಮಗಳ ದುಡಿಮೆಯಲ್ಲಿ ಬದುಕುತ್ತಿದ್ದೀಯಾ ಎಂಬ ಜನರ ಕೊಂಕು ಮಾತುಗಳು ದೀಪಕ್ ಮನಸ್ಸಿಗೆ ನಾಟಿತ್ತು. ಮಗಳ ನಡತೆಯ ಬಗ್ಗೆಯೂ ಜನರು ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲವನ್ನು ಸಹಿಸದೇ ಮಗಳನ್ನು ಗುಂಡಿಟ್ಟು ಕೊಂದಿರುವುದಾಗಿ ದೀಪಕ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net