ಕಾಡಿನಲ್ಲಿ 14 ವರ್ಷದ ಬಾಲಕನ ನರಬಲಿ ಶಂಕೆ: ಮಹಿಳಾ ಅರ್ಚಕಿ ಸೇರಿ ನಾಲ್ವರ ಬಂಧನ

black magic
ಸಾಂದರ್ಭಿಕ ಚಿತ್ರ
Published on

ಅಂಗುಲ್​: ಕಾರ್ಯಸಿದ್ಧಿಗಾಗಿ ಬಾಲಕನ ನರಬಲಿ ಶಂಕೆ ನೀಡಿರುವ ಆರೋಪದಡಿ ಮಹಿಳಾ ಅರ್ಚಕಿ ಸೇರಿ ನಾಲ್ವರನ್ನು ಬಂಧಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಘಟನೆಯು ಒಡಿಶಾದ ಅಂಗುಲ್​ ಬಳಿ ನಡೆದಿದ್ದು, ಸಂಚಿತ್ ಬಿಸ್ವಾಲ್(14) ಮೃತ ದುರ್ದೈವಿಯಾಗಿದ್ದಾನೆ. ತುಸುರು ಗ್ರಾಮದ ರಿತಾಂಜಲಿ ಬಾಗ್‌ ಮತ್ತು ಆಕೆಯ ಮೂವರು ಪುತ್ರರಾದ ಸೌಮ್ಯರಂಜನ್‌, ದಿಬ್ಯರಂಜನ್‌ ಮತ್ತು ಜ್ಯೋತಿರಂಜನ್‌ ಕೃತ್ಯ ಎಸಗಿದ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: ಸರ್ಕಾರ ರಚನೆಯಾದ ಕೆಲ ದಿನಗಳಲ್ಲೇ ಅಭಿವೃದ್ಧಿಗೆ ಹಣವಿಲ್ಲ ಎಂದ ರಾಜ್ಯ ಸರ್ಕಾರ: ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಘಟನೆ ಹಿನ್ನೆಲೆ:
ಸುಬರ್ಣಾಪುರ ಗ್ರಾಮದ ಸಂಚಿತ್ ಬಿಸ್ವಾಲ್ ಎಂಬಾತ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಹಲವಾರು ವೈದ್ಯರನ್ನು ಸಂಪರ್ಕಿಸಿದ ನಂತರವೂ ಆತನ ಆರೋಗ್ಯ ಸುಧಾರಿಸದಿದ್ದಾಗ, ಹುಡುಗನ ತಾಯಿ ಬಸಂತಿ ಜುಲೈ 22ರಂದು ಆರೋಪಿ ರಿತಾಂಜಲಿ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಮಹಿಳೆಯು ಹುಡುಗ ಮತ್ತು ಆತನ ತಾಯಿಯನ್ನು ರಾತ್ರಿ ತನ್ನ ಪೂಜಾ ಸ್ಥಳದಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಇರುವಂತೆ ಹೇಳಿದ್ದಳು.

ಅದರಂತೆ ತಾಯಿ ಮತ್ತು ಮಗ ಬೇರೆ ಕೊಠಡಿಯಲ್ಲಿ ಮಲಗಿದ್ದು. ಮರುದಿನ ಎದ್ದಾಗ ಬಸಂತಿ ತನ್ನ ಮಗನನ್ನು ಕಾಣದೇ ಕಂಗಾಳಾಗಿದ್ದಾಳೆ. ಕೊನೆಗೆ ರಿತಾಂಜಿಲಿಯನ್ನು ಹುಡುಕಾಡಿದ್ದು ಆಕೆಯು ಕೂಡ ಮನೆಯಿಂದ ಕಾಣೆಯಾಗಿದ್ದಳು.

ಇದನ್ನೂ ಓದಿ: ಮೊಸಳೆ ಹತ್ಯೆಗೈದು ಮಾಂಸ ಮಾರಾಟ..!

ಎರಡು ದಿನಗಳ ಬಳಿಕ ಹುಡುಗನ ತಾಯಿಯು ಜುಲೈ 24ರಂದು ಕಿಯಾಕಟಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದು, ಜುಲೈ 28ರಂದು ಬೆಳಿಗ್ಗೆ ಬಾರುನಿ ಕಾಡಿನಲ್ಲಿ ಮರಕ್ಕೆ ನೇತಾಡುತ್ತಿರುವ ಹುಡುಗನ ಮೃತದೇಹವನ್ನು ಗ್ರಾಮಸ್ಥರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಗ್ರಾಮಸ್ಥರು ಇದೊಂದು ನರಬಲಿ ಪ್ರಕರಣ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net