VIDEO|ರಾಘವ್ ಛಡ್ಡಾ ಜತೆ ಲಿಪ್ ಲಾಕ್ ಮಾಡಿದ ಪರಿಣೀತಿ ಚೋಪ್ರಾ

raghav chadha
Published on

ಮುಂಬೈ: ಬಾಲಿವುಡ್​​ ನಟಿ ಪರಿಣೀತಿ ಚೋಪ್ರಾ, ಸಂಸದ ರಾಘವ್ ಛಡ್ಡಾ ಜತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಎಂಗೇಜ್ ಮೆಂಟ್ ದಿನ ಪರಿಣೀತಿ ಹಾಗೂ ರಾಘವ್ ಲಿಪ್ ಲಾಕ್ ಮಾಡಿಕೊಂಡ ವಿಡಿಯೋ ಸಖತ್ ವೈರಲ್ ಆಗಿದೆ.

ನಿಶ್ಚಿತಾರ್ಥದ ದಿನ ಈ ಜೋಡಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸುತ್ತಾರೆ. ನಂತರ ಹಿಂದಿ ಸಾಂಗ್​ಗೆ ಡಾನ್ಸ್​​ ಮಾಡಿದ್ದಾರೆ. ಪರಿಣೀತಿ, ರಾಘವ್ ಪರಸ್ಪರ ಅಪ್ಪಿಕೊಂಡು ರೋಮ್ಯಾಂಟಿಕ್ ಆಗಿ ಲಿಪ್ ಲಾಕ್ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್​​ ಮೀಡಿಯಾ ತುಂಬಾ ಹರಿದಾಡುತ್ತಿದೆ.

ಈ ಜೋಡಿಯ ನಿಶ್ಚಿತಾರ್ಥ ಸಮಾರಂಭಂದಲ್ಲಿ ರಾಜಕೀಯ ಗಣ್ಯರು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳ ಭಾಗಿಯಾಗಿದ್ದರು. ಪರಿಣೀತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಇಡೀ ಸಮಾರಂಭದಲ್ಲಿ ಮಿಂಚಿದ್ದಾರೆ.

ದೆಹಲಿಯ ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್ ನಲ್ಲಿ ಪರಿಣೀತಿ ಚೋಪ್ರಾ ಹಾಗೂ ರಾಘವ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇಬ್ಬರೂ ಹಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಹರಿಯಾಣದಲ್ಲಿ ನಡೆದ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿ ಆನಂತರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪೋಷಕರ ಒಪ್ಪಿಗೆ ಪಡೆದುಕೊಂಡೇ ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net