ಡಿಎನ್​ ಅಕ್ಕಿ ಉಪನ್ಯಾಸ

DN Rice lecture
ಡಿಎನ್​ ಅಕ್ಕಿ
Published on

ವಿಜಯಪುರ : ನಗರದ ಉಪಲಿ ಬುರ್ಜ್​ ಸಮೀಪವಿರುವ ಬಿಡಿಇ ಸೂಸೆಟಿಯ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆ 10.30 ಕ್ಕೆ ಹಿರಿಯ ಸಾಹಿತಿ ಡಿ.ಎನ್​.ಅಕ್ಕಿ ಅವರ ಉಪನ್ಯಾಸ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್​ ವಿಜಯಪುರ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸತ ಸಾಹಿತಿ ಡಿ.ಎನ್​.ಅಕ್ಕಿ ಅವರ ಉಪನ್ಯಾಸ ಏರ್ಪಡಿಸಲಾಗಿದೆ. ಅಭಾಸಾಪ ಜಿಲ್ಲಾಧ್ಯ ನಾರಾಯಣ ಬಾಬಾನಗರ ಅವರ "ಕಾಖಂಡಕಿ ಶ್ರೀಮಹಿಪತಿ ದಾಸರ ಮುಂಡಿಗೆಗಳು' , ಅಭಾಸಾಪ ಸದಸ್ಯರಾದ ಬಳವಂತ ಕುಲಕರ್ಣಿ ಅವರ "ಅರುಣೋದಯ ಕಿರಣ' ಕವನ ಸಂಕಲನ ಹಾಗೂ ಅಭಾಸಾಪ ಇಂಡಿ ತಾಲ್ಲೂಕಾಧ್ಯ ಕಿಶೋರ ಕುಮಾರ್​ ಅವರು ಅನುವಾದಿಸಿರುವ "ಅರವಿಂದರ ಪ್ರೀತಿ ಮತ್ತು ಮೃತ್ಯು' ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಹಿರಿಯ ಸಾಹಿತಿ ಸಿರಿಗನ್ನಡ ವೇದಿಕೆಯ ಸಂಸ್ಥಾಪಕಾಧ್ಯ ಎನ್​.ಆರ್​ ಕುಲಕರ್ಣಿ ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net