ಅವಾಂತರ ಸೃಷ್ಟಿಸಿರುವ ಪಿಂಕ್ ವಾಟ್ಸ್‌ಆ್ಯಪ್: ಅದರಿಂದ ಹೊರಬರೋದು ಹೇಗೆ? ಇಲ್ಲಿದೆ ನೋಡಿ ಐಡಿಯಾ!

pink whatsapp
Published on

ಬೆಂಗಳೂರು: ಪಿಂಕ್ ವಾಟ್ಸ್‌ಆ್ಯಪ್ ಕುರಿತ ಸಂದೇಶವನ್ನು ಒತ್ತಿದವರು ತಾವಿರುವ ಗ್ರೂಪ್‌ಗಳಲ್ಲಿ ಇತರರಿಂದ ಬೈಯಿಸಿಕೊಂಡು ಮುಜುಗರಕ್ಕೆ ಒಳಗಾಗುತ್ತಿರುವ ಪ್ರಸಂಗಗಳು ಕಳೆದೆರಡು ದಿನಗಳಿಂದ ನಿರಂತರವಾಗಿ ನಡೆಯುತ್ತಿವೆ. ತಿಳಿಯದೇ ಆ ಸಂದೇಶ ಒತ್ತಿದವರು ಈಗ ಅದರಿಂದ ಹೇಗೆ ಹೊರಬರುವುದೆಂದು ಚಿಂತೆಗೀಡಾಗಿದ್ದಾರೆ.

ಪಿಂಕ್ ವಾಟ್ಸ್‌ಆ್ಯಪ್ ನ್ಯೂ ವರ್ಶನ್ ಹೆಸರಿನಲ್ಲಿ ಬರುವ ಈ ಲಿಂಕ್ ಅನ್ನು ಒತ್ತುತ್ತಿದ್ದಂತೆಯೇ ಗ್ರೂಪ್‌ಗಳಲ್ಲಿ ಸಾಲು ಸಾಲಾಗಿ ಅದೇ ಸಂದೇಶಗಳು ಫಾರ್ವರ್ಡ್ ಆಗುತ್ತಿರುವುದು ಬಹಳಷ್ಟು ಜನರಿಗೆ ದೊಡ್ಡ ತಲೆನೋವು ತಂದಿದೆ. ಲಿಂಕ್ ಒತ್ತಿದವರ ಫೋನ್‌ನಲ್ಲಿ ಸೇವ್ ಆಗುವ ಆ ಪಿಂಕ್ ವಾಟ್ಸ್‌ಆ್ಯಪ್ ನಂತರ ಪದೇಪದೇ ಅವರಿರುವ ಗ್ರೂಪ್‌ಗಳಿಗೆ ತನ್ನಿಂತಾನೇ ಮೆಸೇಜ್ ಕಳಿಸುತ್ತದೆ. ಒಮ್ಮೆ ಎಲ್ಲರಿಂದ ಬೈಸಿಕೊಂಡವರ ನಂಬರ್‌ನಿಂದಲೇ ಮತ್ತೆ ಅದೇ ಮೆಸೇಜ್ ಫಾರ್ವರ್ಡ್ ಆಗುವುದರಿಂದ ಮತ್ತೆ ಮತ್ತೆ ಬೈಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.

ಹಾಗಾಗಿ ಈ ‘ಚಕ್ರವ್ಯೂಹ’ದಿಂದ ಹೊರಬರುವುದು ಹೇಗೆ ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಮೊಬೈಲ್ ರಿಸ್ಟಾರ್ಟ್ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಕೊನೆಗೂ ಕೆಲವರು ಕಂಡುಹಿಡಿದಿದ್ದಾರೆ. ಸೆಟಿಂಗ್ಸ್‌ನಲ್ಲಿ ಡೌನ್‌ಲೋಡೆಡ್ ಆ್ಯಪ್ಸ್‌ಗೆ ಹೋಗಿ ಈ ಹೊಸ ಆ್ಯಪ್ ಡೌನ್‌ಲೋಡ್ ಆಗಿರುವುದನ್ನು ಡಿಲೀಟ್ ಮಾಡಬೇಕು. ಮೆಮರಿಯಿಂದಲೂ ಅದನ್ನು ತೆಗೆದುಹಾಕಬೇಕು. ನಂತರ ಮೊಬೈಲ್ ರಿಸ್ಟಾರ್ಟ್ ಮಾಡಿದರೆ ಆಗ ಪಿಂಕ್ ವಾಟ್ಸ್‌ಆ್ಯಪ್ ಕಾಟ ಇರುವುದಿಲ್ಲ. ಕೆಲವರು ಅದನ್ನು ಹೇಗೆ ತೆಗೆದುಹಾಕಬೇಕೆಂಬುದನ್ನು ವಿವರಿಸುವ ವಿಡಿಯೋ ಕೂಡ ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net