

ಬೆಂಗಳೂರು: ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸ್ಥಿರಾಸ್ತಿ ನೋಂದಣಿಗೆ ಡಿಜಿಟಲ್ ಖಾತಾ (ಇ-ಖಾತಾ) ಕಡ್ಡಾಯ ಮಾಡಿರುವುದರಿಂದ ಬಿಬಿಎಂಪಿ ಆನ್‌ಲೈನ್‌ನಲ್ಲಿ ಇಂದೇ ಅರ್ಜಿ ಸಲ್ಲಿಸಿ ಖಾತಾ ಪಡೆಯಿರಿ. ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಿಮ್ಮ ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಿ. ತಮ್ಮ ಸ್ವತ್ತಿನ ಆಸ್ತಿ ತೆರಿಗೆ ರಸೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ತಿಳಿದುಕೊಳ್ಳಿ. ಅಂತಿಮ ಇ-ಖಾತಾ ಪಡೆಯಲು ಈ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ಅಪ್‌ಲೋಡ್ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಠಿಠಿ://ಚಿಚಿಞಛಿಠಿಜಿ.ಚ್ಟ್ಞಠಿ.ಜಟ.ಜ್ಞಿ ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಬೇಕು. ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗಾಗಿ 1533ಗೆ ಕರೆ ಮಾಡುವಂತೆ ಸಲಹೆ ನೀಡಿದ್ದಾರೆ.
ತಮ್ಮ ಸ್ವತ್ತಿನ ಆಸ್ತಿ ತೆರಿಗೆ ಅರ್ಜಿ ಸಂಖ್ಯೆಯ 10 ಅಂಕಿಗಳನ್ನು ನಮೂದಿಸಬೇಕು. ಬಳಿಕ ಮಾಲೀಕರ ಆಧಾರ್ ಆಧಾರಿತ ಇ-ಕೆವೈಸಿ ದೃಢೀಕರಿಸಬೇಕು. ಇ-ಖಾತಾನಲ್ಲಿ ಇರುವ ಎಲ್ಲ ಮಾಲೀಕರ ಇ-ಕೆವೈಸಿ ಮಾಡಬೇಕಾಗಿದೆ. ಯಾವುದೇ ಮಾಲೀಕರು ಆಧಾರ್ ಹೊಂದಿಲ್ಲದಿದ್ದರೆ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಚಾಲನ ಪರವಾನಗಿಯನ್ನು ಬಳಸಿ ದೃಢೀಕರಿಸಬೇಕಾಗಿದೆ.
ಇದಾದ ಮೇಲೆ ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ, ದಾನ ಪತ್ರ ಇತ್ಯಾದಿ) ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಮಾತ್ರ ಪಡೆಯಲಾಗುತ್ತದೆ. ಆಸ್ತಿಯ ಹಕ್ಕು ನಿರೂಪಿಸುವ ನೋಂದಾಯಿತ ಪತ್ರವು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ ದಿನಾಂಕ 2018ರ ಅಕ್ಟೋಬರ್ 18ರವರೆಗೆ ಆಸ್ತಿಯ ಋಣಭಾರ ಪ್ರಮಾಣ ಪತ್ರ ಅಗತ್ಯವಾಗಿ ಇರಬೇಕು. ಆಸ್ತಿಯ ಮಾಲೀಕರು, ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ೆಟೋ ಮತ್ತು ಬೆಸ್ಕಾಂ 10 ಅಂಕಿಯ ಅಕೌಂಟ್ ಐಡಿ (ಖಾಲಿ ಜಮೀನಿಗೆ ಕಡ್ಡಾಯವಲ್ಲ) ಮತ್ತು ಬಿಡಬ್ಲುೃಎಸ್‌ಎಸ್ ಬಿಲ್ ಇದ್ದರೆ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಕ್ರಮಬದ್ಧತೆ ಅಗತ್ಯ
ಆನ್‌ಲೈನ್‌ನಲ್ಲಿ ಮಾಹಿತಿ ಮತ್ತು ದಾಖಲೆಗಳು ಅಪ್‌ಲೋಡ್ ಮಾಡಿದ ಬಳಿಕ ಎಲ್ಲವೂ ಕ್ರಮಬದ್ಧವಾಗಿದ್ದರೆ ಒಂದೇ ದಿನದಲ್ಲಿ ಅಂತಿಮ ಇ-ಖಾತಾವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಯನ್ನು ಭೇಟಿ ಮಾಡಿ ಪಡೆಯಬಹುದು. ಎಲ್ಲ ಮಾಹಿತಿ, ದಾಖಲೆ ಇದ್ದವರು ತುರ್ತು ನೋಂದಣಿಯನ್ನು ಹೊಂದಿದ್ದರೆ ಅಂತಹವರು ತಹಲ್‌ವರೆಗಿನ ಋಣಭಾರ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿದರೆ ಅಪ್‌ಲೋಡ್ ಮಾಡಿ ಒಂದೇ ದಿನದಲ್ಲಿ ಇ-ಖಾತಾ ಪಡೆಯಲು ಸಹಾಯ ಮಾಡಲಿದ್ದಾರೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.