'ಹಾಯ್ ನನ್ನಾ': ಕೆಲವೇ ದೃಶ್ಯಗಳ ಅಭಿನಯಕ್ಕೆ ನಟಿ ಶ್ರುತಿ ಹಾಸನ್ ಪಡೆದ್ರು ಈ ಸಂಭಾವನೆ!

Untitled design (1)
Published on

ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ಮತ್ತು ಮೃಣಾಲ್ ಠಾಕೂರ್​ ಮುಖ್ಯಭೂಮಿಕೆಯಲ್ಲಿನ 'ಹಾಯ್ ನನ್ನಾ' ಚಿತ್ರದಲ್ಲಿ ಸ್ಪೆಷಲ್ ಎಂಟ್ರಿಯಾಗಿ ಕಾಣಿಸಿಕೊಂಡಿರುವ ನಟಿ ಶ್ರುತಿ ಹಾಸನ್​, ಸಿನಿಮಾದಲ್ಲಿನ ಕೆಲವು ದೃಶ್ಯಗಳ ಅಭಿನಯಕ್ಕೆ ಪಡೆದುಕೊಂಡ ಸಂಭಾವನೆ ಮೊತ್ತ ಎಷ್ಟಿದೆ ಎಂಬುದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಅಷ್ಟಕ್ಕೂ ಒಂದು ಹಾಡು ಮತ್ತು ಕೆಲವೇ ಸೀನ್​ಗಳ ನಟನೆಗೆ ನಟಿ ಎಷ್ಟು ಹಣವನ್ನು ಪಡೆದುಕೊಂಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಟಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ 'ಹಾಯ್ ನನ್ನಾ' ರೊಮ್ಯಾಂಟಿಕ್-ಡ್ರಾಮಾ ಜಾನರ್​ ಒಳಗೊಂಡಿದ್ದು, ಈ ಚಿತ್ರವನ್ನು ಶೌರ್ಯುವ್ ನಿರ್ದೇಶಿಸಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 7, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರುತಿ ಹಾಸನ್, ಚಿತ್ರದ ಒಂದು ಹಾಡು ಸೇರಿದಂತೆ ಕೆಲವೇ ಕೆಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಇದಕ್ಕೆ ಅವರು ಪಡೆದ ಸಂಭಾವನೆ ಮೊತ್ತ ಬರೋಬ್ಬರಿ 90 ಲಕ್ಷ ರೂ. ಎಂದು ಇತ್ತೀಚಿನ ಸಿನಿ ವರದಿ ಮಾಹಿತಿ ನೀಡಿದೆ.

ಕಾಲಿವುಡ್​ ಚಿತ್ರರಂಗದ ಟಾಪ್ ನಟಿಯಾಗಿರುವ ಶ್ರುತಿ ಹಾಸನ್​, ಸಾಕಷ್ಟು ಹಿಟ್ ಚಿತ್ರಗಳಲ್ಲಿ ಈ ಹಿಂದೆಯೂ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅದೇ ರೀತಿ 'ಹಾಯ್ ನನ್ನಾ' ಕೂಡ ಸೂಪರ್ ಹಿಟ್​ ಆಗಲಿದೆ ಎಂಬುದು ಅವರ ಅಭಿಮಾನಿಗಳ ಅನಿಸಿಕೆ. ಚಿತ್ರದಲ್ಲಿ ನಾನಿ, ಮೃಣಾಲ್, ಬೇಬಿ ಕಿಯಾರಾ, ಅಂಗದ್ ಬೇಡಿ, ಜಯರಾಮ್ ಮುಂತಾದವರ ತಾರಾಗಣವಿದೆ. ಸಿನಿಮಾಗೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net