ರಿಯಾಳ ಡ್ರಗ್​ ಖರೀದಿ ಪ್ರಕ್ರಿಯೆ ಹೇಗಿತ್ತು?; ಎಷ್ಟು ಜನರಿಂದ ಸುಶಾಂತ್​ಗೆ ಡ್ರಗ್​ ತಲುಪುತ್ತಿತ್ತು?

9
Published on

ಡ್ರಗ್​ ಮಾಫಿಯಾ ವಿಚಾರವಾಗಿ ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಅವರ ವಿಚಾರಣೆ ಮುಂದುವರಿದಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಕೆಲವರನ್ನು ಎನ್​ಸಿಬಿ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೀಗ ಕುತೂಹಲದ ವಿಚಾರವೊಂದು ಹೊರಬಂದಿದೆ. ಸುಶಾಂತ್​ಗೆ ಯಾರೆಲ್ಲರ ಕೈಯಿಂದ ಡ್ರಗ್​ ಸೇರುತ್ತಿತ್ತು ಎಂಬ ಅಂಶ ಬಯಲಾಗಿದೆ.

ಈಗಾಗಲೇ ಬಂಧಿತನಾಗಿರುವ ಡ್ರಗ್​ ಪೆಡ್ಲರ್ ಜೈದ್​ ವಿಲತಾರಾ ವಿಚಾರಣೆ ವೇಳೆ ಈ ಡ್ರಗ್​ ಸಾಗಾಟದ ಬಗ್ಗೆ ಮಾಹಿತಿ ನೀಡಿದ್ದಾನೆ. ಅಬ್ದೇಲ್​ ಬಸೀದ್​ ಎಂಬುವವನ ಕೈಯಿಂದ ಡ್ರಗ್​ ಸಾಗಾಟ ಶುರುವಾಗುತ್ತಿತ್ತು. ಆತ ಶೋವಿಕ್​ ಚಕ್ರವರ್ತಿ ಸೂಚನೆ ಮೇರೆಗೆ ಇನ್ನೋರ್ವ ಡ್ರಗ್​ ಪೆಡ್ಲರ್​ ಕೈಜಾನ್​ ಇಬ್ರಾಹಿಂಗೆ ಅದನ್ನು ತಲುಪಿಸುತ್ತಿದ್ದ. ಬಳಿಕ ಅದು ಶೋವಿಕ್​ ಮತ್ತು ರಿಯಾ ಕೈಗೆ ಸೇರುತ್ತಿತ್ತು. ಅದಾದ ಬಳಿಕ ರಿಯಾ ಆ ಡ್ರಗ್​ ಪಡೆದು, ಮನೆಯ ಮ್ಯಾನೇಜರ್​ ಸ್ಯಾಮ್ಯೂಲ್​ ಮೂಲಕ ಸುಶಾಂತ್​ಗೆ ತಲುಪಿಸುತ್ತಿದ್ದ ಎಂಬ ಅಂಶ ವಿಚಾರಣೆ ವೇಳೆ ತಿಳಿದುಬಂದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಬಾಲಿವುಡ್​ನ ದೊಡ್ಡ ಕುಳಗಳನ್ನೇ ಡ್ರಗ್​ ಟಾರ್ಗೇಟ್​ ಮಾಡಿ, ಗೂಗಲ್​ ಪೇ ಮೂಲಕ ಹಣದ ವರ್ಗಾವಣೆ ಆಗುತ್ತಿರುವ ಬಗ್ಗೆಯೂ ಎನ್​ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕೆಲ ವೇಳೆ ಸ್ವತಃ ಮ್ಯಾನೇಜರ್​ ಸ್ಯಾಮ್ಯೂಲ್​ ಅವರೇ ಡ್ರಗ್​ ಪಡೆದುಕೊಂಡು, ಅದನ್ನು ಸುಶಾಂತ್​ಗೆ ನೀಡುತ್ತಿದ್ದರಂತೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಇನ್ನು ಈ ಮೊದಲು ಸುಶಾಂತ್​ ಖಿನ್ನತೆ ಹಿನ್ನೆಲೆಯಲ್ಲಿ ಹಲವು ಮಾತ್ರೆಗಳನ್ನು ಸೇವಿಸುತ್ತಿದ್ದರು. ಈ ವಿಚಾರವನ್ನು ಸ್ವತಃ ಈ ಹಿಂದೆಯೇ ಕೇಳಿಕೊಂಡಿದ್ದರು. ನಾನೇ ಸುಶಾಂತ್​ಗೆ ಆಸ್ಪತ್ರೆಗೆ ಕರೆದೊಯ್ದಿದ್ದೆ ಮತ್ತು ಔಷಧ ನೀಡಿದ್ದೆ ಎಂದಿದ್ದರು. ಇದೀಗ ಔಷಧ ರೂಪದಲ್ಲಿ ಡ್ರಗ್​ ನೀಡಿದ್ರಾ ಎಂಬ ಪ್ರಶ್ನೆಯೂ ಮೂಡುತ್ತಿದ್ದು, ತನಿಖೆಯ ಬಳಿಕವೇ ಈ ಅಂಶ ಬಯಲಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net