ರಿಯಾ ಅಕ್ರಮ ಡ್ರಗ್ಸ್ ಖರೀದಿಸುತ್ತಿದ್ದರು; ಬಂಧನದ ಬಳಿಕ ಸುಶಾಂತ್​ ಮನೆಕೆಲಸದವ ಹೇಳಿದ ಸತ್ಯವಿದು

fgeght
Published on

ಸುಶಾಂತ್​ ಸಿಂಗ್​ ಆತ್ಮಹತ್ಯ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಿಬಿಐ ತನಿಖೆ ಶುರುವಾಗುತ್ತಿದ್ದಂತೆ ಡ್ರಗ್ಸ್ ಮಾಫಿಯಾ ಬೆಳಕಿಗೆ ಬಂದು ಇಡೀ ಬಾಲಿವುಡ್​ ಆತಂಕದಲ್ಲಿದೆ. ಇದೀಗ ಇತ್ತೀಚಿನ ವರದಿಯ ಪ್ರಕಾರ, ಸುಶಾಂತ್​ ಮನೆ ಕೆಲಸದವನನ್ನು ಎನ್​ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಬಂಧಿಸಿದೆ. ಬಂಧನದ ಬಳಿಕ ರಿಯಾ ವಿರುದ್ಧ ಅಚ್ಚರಿಯ ವಿಚಾರವೊಂದನ್ನು ಆತ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.

ಸೆಪ್ಟೆಂಬರ್​ 4ರಂದು ಎನ್​ಸಿಬಿ ತಂಡ ರಿಯಾ ಚಕ್ರವರ್ತಿ ಮತ್ತು ಶೋವಿಕ್ ಚಕ್ರವರ್ತಿ ಸೇರಿ ಸುಶಾಂತ್​ ಮ್ಯಾನೇಜರ್​ ಸ್ಯಾಮ್ಯೂಲ್​ ಮಿರಿಂಡಾ ಮನೆ ಮೇಲೆ ದಾಳಿ ಮಾಡಿತ್ತು. ಆವತ್ತೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಇದೀಗ ಶನಿವಾರ ಸುಶಾಂತ್​ ಮನೆಕೆಲಸದವ ದೀಪೇಶ್​ ಸಾವಂತ್​ನನ್ನು ಬಂಧಿಸಿದ್ದಾರೆ.

ಸುಶಾಂತ್​ ವಾಸವಿರುವ ಬಾಂದ್ರಾ ಮನೆಯ ಕೆಳಗಿನ ಮಹಡಿಯಲ್ಲಿ ದೀಪೇಶ್​ ವಾಸವಾಗಿದ್ದ. ಇನ್ನೊಂದು ಅಚ್ಚರಿ ವಿಚಾರ ಏನೆಂದರೆ, ಸುಶಾಂತ್​ ಆತ್ಮಹತ್ಯೆ ಹಿಂದಿನ ದಿನ ಜೂ.13ರಂದು ಸಿದ್ಧಾರ್ಥ ಪಿಟಾಣಿ, ಕೇಶವ್​, ನೀರಜ್​ ಮತ್ತು ದೀಪೇಶ್​ ಸಹ ಇದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಅಕ್ರಮ ಡ್ರಗ್ಸ್​ ಖರೀದಿಯಲ್ಲಿ ರಿಯಾ ಅವರ ಪಾತ್ರ ಇದೆ ಎಂದು ಆರೋಪಿಸಿ ತನಿಖೆ ವೇಳೆ ದೀಪೇಶ್​ ಬಾಯ್ಬಿಟ್ಟಿದ್ದಾನೆ.

ಇತ್ತ ಸುಶಾಂತ್​ ಮನೆಯ ಮ್ಯಾನೇಜರ್​ ಸ್ಯಾಮ್ಯೂಲ್​ ಸಹ ರಿಯಾಗೆ ಡ್ರಗ್​ ನಂಟಿತ್ತು ಎಂಬುದನ್ನು ಈ ಹಿಂದೆ ಹೇಳಿಕೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net