

ಚೆನ್ನೈ: ಕಾಲಿವುಡ್ನಲ್ಲಿ ಚಿಯಾನ್ ಎಂದು ಖ್ಯಾತಿ ಪಡೆದಿರುವ ನಟ ವಿಕ್ರಮ್ ತಮ್ಮ ಸಿನಿಮಾಗಳಲ್ಲಿ ಒಂದಲ್ಲಾ ಒಂದು ರೀತಿಯ ಎಕ್ಸ್ಪೆರಿಮೆಂಟ್ ಮಾಡುತ್ತಿರುತ್ತಾರೆ. ಪ್ರತಿ ಸಿನಿಮಾದಲ್ಲೂ ಅವರ ಡೆಡಿಕೇಷನ್ ನೋಡಿ ಥ್ರಿಲ್ ಆಗದವರೇ ಇಲ್ಲ. ಸದ್ಯ ವಿಕ್ರಮ್ ತಮ್ಮ ಮುಂದಿನ ಸಿನಿಮಾ ತಂಗಳನ್ ಪ್ರಚಾರದಲ್ಲಿ ಬಿಸಿಯಾಗಿದ್ದಾರೆ.
ತಂಗಳನ್ ಸಿನಿಮಾದ ಪ್ರಚಾರದಲ್ಲಿರುವ ನಟ ವಿಕ್ರಮ್ಗೆ ನಿಮಗೆ ಅಜಿತ್, ವಿಜಯ್ ಮತ್ತು ಸೂರ್ಯ ಅವರಿಗಿರುವಷ್ಟು ಅಭಿಮಾನಿಗಳು ಇಲ್ಲ ಎನ್ನಿಸುತ್ತದೆ ಎಂದು ಕೇಳಲಾಗಿದೆ. ಅದಕ್ಕೆ ಕೂಲ್ ಆಗಿಯೇ ಉತ್ತರಿಸಿದ ವಿಕ್ರಮ್, ನನ್ನ ಅಭಿಮಾನಿಗಳ ಬಗ್ಗೆ ನಿಮಗೆ ತಿಳಿದಿಲ್ಲ. ಸಿನಿಮಾ ರಿಲೀಸ್ ಆದ ಬಳಿಕ ಥಿಯೇಟರ್ಗೆ ಬಂದು ನೋಡಿ. ನಿಮಗೆ ಆಗ ತಿಳಿಯುತ್ತದೆ ನನ್ನ ಅಭಿಮಾನಿಗಳ ಬಗ್ಗೆ ಎಂದು ಹೇಳಿದ್ದಾರೆ.
ಬಳಿಕ ವಿಕ್ರಮ್ಗೆ ನೀವು ಟಾಪ್ 3 ಲೀಡಿಂಗ್ ನಟರ ಲಿಸ್ಟ್ನಲ್ಲಿ ಇಲ್ಲ ಎಂದು ಕೇಳಲಾಯಿತು. ಅದಕ್ಕೆ ಈ ಟಾಪ್ 3, 4, 5 ಲಿಸ್ಟ್ನಲ್ಲಿರುವುದು ಮುಖ್ಯವಲ್ಲ. ಅಭಿಮಾನಿಗಳು ಇರುವುದು ಬೇರೆ...ಜನರಲ್ ಆಡಿಯನ್ಸ್ ಕೂಡ ಇರುತ್ತಾರೆ. ಒಂದಲ್ಲಾ ಒಂದು ರೀತಿ ಎಲ್ಲರೂ ಸಿನಿಮಾದ ಅಭಿಮಾನಿಗಳೆ. ಸಿನಿಮಾಗೆ ಪ್ರೇಕ್ಷಕರು ಮುಖ್ಯ ಎಂದು ಹೇಳಿದರು.
ಈ ಮಧ್ಯೆ ಅಲ್ಲೇ ಇದ್ದ ಮತ್ತೊಬ್ಬರು. ಸರ್ ನಾನು ನಿಮ್ಮ ಅಭಿಮಾನಿ, ಈ ರೀತಿಯ ಪ್ರಶ್ನೆ ಕೇಳುತ್ತಿದ್ದರೆ ಸುಮ್ಮನೆ ಇರಲು ಸಾಧ್ಯವಿಲ್ಲ. ನೀವು ಕೇಳುತ್ತಿರುವ ಎಲ್ಲರಿಗೂ ದ್ವೇಷಿಸುವವರು ಇದ್ದಾರೆ ಆದರೆ ನಮ್ಮ ಹೀರೋಗೆ ಇಲ್ಲ ಎಂದು ಹೇಳಿದರು. ಅದಕ್ಕೆ ವಿಕ್ರಮ್ ಧನ್ಯವಾದ ಎಂದು ಹೇಳಿದರು.
ಬಳಿಕ ವಿಕ್ರಮ್, ನನ್ನ ಅಭಿಮಾನಿಗಳ ಬಗ್ಗೆ ಹೇಳುವುದು ಬೇಡ. ನೀವೆ ಥಿಯೇಟರಿಗೆ ಬರುತ್ತಿರಾ ಅಲ್ಲವೇ.. ನಿಮ್ಮ ನಂಬರ್ ಅನ್ನು ನಮ್ಮ ಅಸಿಸ್ಟೆಂಟ್ಗೆ ಕೊಟ್ಟು ಹೋಗಿ, ನಾಳೆ ನೀವೇ ಉಲ್ಲೇಖಿಸಿದ ನಟರ ಬಳಿ ಇದೇ ಪ್ರಶ್ನೇ ಕೇಳುತ್ತೀರಿ ಎಂದು ಹೇಳಿದರು.
ನಾನು ಧೂಳ್, ಸ್ವಾಮಿ ಸಿನಿಮಾ ಮಾಡಿದ್ದೇನೆ. ಅಂತಹ ಚಿತ್ರಗಳನ್ನು ಹೇಗೆ ಮಾಡಬೇಕೆಂದು ತಿಳಿದಿದೆ. ಆದರೆ ಸಿನಿಮಾದಲ್ಲಿನ ಅನ್ವೆಷಣೆಯೆ ಬೇರೆ. ಹೊಸ ಬೆಳವಣಿಗೆಗಳು, ಹೊಸ ಕಥೆಯ ಮೂಲಕ ಸಿನಿಮಾವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬುದು ನನ್ನ ಆಶಯ. ಅದರ ಪರಿಣಾಮವೇ ತಂಗಳನ್ ಎಂದು ತಿಳಿಸಿದರು. ನಟ ವಿಕ್ರಮ್ ಅವರ ತಂಗಳನ್ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಮಾಳವಿಕಾ ಮೋಹನನ್, ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)