ಭಾರಿ ಮಳೆಯಿಂದ ಕುಸಿದ ಮನೆ ಗೋಡೆ

30ark2
ಅರಕಲಗೂಡು ತಾಲೂಕಿನ ಹಾನಗಲ್ ಗ್ರಾಮದಲ್ಲಿ ಮಳೆಯಿಂದಾಗಿ ವೀಣಾ ಮಂಜೇಶ್ ಎಂಬುವರ ಮನೆ ಕುಸಿದು ಹಾನಿಗೀಡಾಗಿರುವುದು.
Published on

ಅರಕಲಗೂಡು: ತಾಲೂಕಿನಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಹಲವೆಡೆ ಮನೆಗಳ ಗೋಡೆ ಕುಸಿದು ಹಾನಿಗೀಡಾಗಿವೆ.

ಮಳೆಯಿಂದಾಗಿ ಬಾಗದಾಳು ಗ್ರಾಮದ ಸುಶೀಲಾ ಚಿನ್ನಪ್ಪ ಅವರ ಮನೆಯ ಗೋಡೆ ಕುಸಿದಿದೆ. ಬುಧವಾರ ರಾತ್ರಿ ಹಾನಗಲ್ ಗ್ರಾಮದ ವೀಣಾ ಮಂಜೇಶ್ ಅವರ ಮನೆಯ ಗೋಡೆ ಕುಸಿದಿದೆ. ಪರಿಣಾಮ ಮನೆಯಲ್ಲಿದ್ದ ಧವಸ ಧಾನ್ಯಗಳು ಹಾನಿಯಾಗಿವೆ. ಮನೆಯೊಳಗಿದ್ದ ವೀಣಾ ಅವರ ಅಣ್ಣ ಶಂಕರಮೂರ್ತಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರೇಡ್- 2 ತಹಸೀಲ್ದಾರ್ ಸಿ. ಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net