ಗೊಗ್ಗಿ ಗ್ರಾಮದ ಹಳ್ಳಕ್ಕೆ ಸೇತುವೆ ನಿರ್ಮಿಸಿ

12hos1p goggi
ಹೊಸನಗರ ತಾಲೂಕಿನ ತ್ರಿಣಿವೆ ಗ್ರಾಮದ ಗೊಗ್ಗಿ ಸ್ಥಳಕ್ಕೆ ಗ್ರಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.
Published on

ಹೊಸನಗರ: ಹಲವು ದಶಕದಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ತ್ರಿಣಿವೆ ಗ್ರಾಪಂ ವ್ಯಾಪ್ತಿಯ ಕಲ್ಲುವೀಡು-ಅಬ್ಬಿಗಲ್ಲು ಗ್ರಾಮಕ್ಕೆ ಸಮೀಪದಲ್ಲಿ ಗೊಗ್ಗಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಲವು ವರ್ಷಗಳಿಂದ ಆ ಭಾಗದ ಗ್ರಾಮಸ್ಥರು ಒತ್ತಾಯಿಸುತ್ತಿದ್ದರೂ ಈವರೆಗೂ ಸಂಬಂಧಿಸಿದವರು ಸ್ಪಂದಿಸಿಲ್ಲ. ಇಟ್ಟಕ್ಕಿ ಮುಖ್ಯರಸ್ತೆಯಿಂದ ಮೇಲಿನ ಗೊಗ್ಗಿ ಹಾಗೂ ಕೆಳಗಿನ ಗೊಗ್ಗಿ ಗ್ರಾಮಗಳಿಗೆ ತೆರಳಲು ಎರಡು ಅವಳಿ ಹಳ್ಳಗಳನ್ನು ದಾಟಬೇಕಿದೆ. ಮಳೆಗಾಲದಲ್ಲಿ ಹಳ್ಳ ಉಕ್ಕಿ ಹರಿಯುವ ಕಾರಣ ರಸ್ತೆ ಸಂಪರ್ಕ ಕಡಿತವಾಗುತ್ತದೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಿದ್ದಾರೆ.
ವಿದ್ಯಾರ್ಥಿಗಳು, ವೃದ್ಧರು, ಆನಾರೋಗ್ಯಪೀಡಿತರು ರಸ್ತೆ ದಾಟಲು ತೊಂದರೆ ಆಗುತ್ತಿದೆ. ಮೇಲಿನ ಗೊಗ್ಗಿ-ಕೆಳಗಿನ ಗೊಗ್ಗಿ ಗ್ರಾಮಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಬಡ ಕುಟುಂಬಗಳು ವಾಸಿಸುತ್ತಿವೆ. ಈ ಭಾಗದಲ್ಲಿ ಹರಿಯುವ ಅವಳಿ ಹಳ್ಳಕ್ಕೆ ನೂತನ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಲ್ಲಿ ಮಾತ್ರ ಶಾಶ್ವತ ಪರಿಹಾರ ಸಾಧ್ಯ ಎಂಬುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net