ಸೈಕಲ್​​ಗೆ ಡಿಕ್ಕಿ ಹೊಡೆದು, ಸವಾರನ ಸಮೇತ 2 ಕಿ.ಮೀ ಎಳೆದೊಯ್ದ ಚಾಲಕ: ಶಾಕಿಂಗ್‌ ವಿಡಿಯೋ ಇಲ್ಲಿದೆ

acc
Published on

ಚಂಡಿಗಢ: ವೇಗವಾಗಿ ಬಂದ ಪಿಕ್‌ಅಪ್‌ ವಾಹನವೊಂದು ಸೈಕಲ್‌ ಸವಾರಿಗೆ ಗುದ್ದಿ ದೇಹವನ್ನು ಸುಮಾರು 2 ಕಿ.ಮೀ.ಯಷ್ಟು ದೂರು ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಚಿತ್ರೀಕರಿಸಲಾಗಿದೆ.

ಹರಿಯಾಣದ ರಾಷ್ಟ್ರೀಯ ಹೆದ್ದಾರಿ 9ರ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಶಾಕ್​ಗೆ ಒಳಗಾಗಿದ್ದಾರೆ. ಪಿಕ್‌ಅಪ್‌ ವಾಹನ ಹಿಂದಿದ್ದ ಕೆಲವರು ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಪಿಕ್‌ಅಪ್‌ ವಾಹನವನ್ನು ನಿಲ್ಲಿಸಿ ಚಾಲಕನಿಗೆ ಥಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಕರ್ಮ್‌ಗಢ್ ಗ್ರಾಮದ 50 ವರ್ಷದ ಗುರ್ನಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಪನ್ನಿವಾಲಾ ಮೋಟಾದಿಂದ ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಪಿಕಅಪ್ ಟ್ರಕ್ ಸೈಕಲ್ ಸವಾರನನ್ನು ಗುದ್ದಿ ಆ ವ್ಯಕ್ತಿಯನ್ನು ಎಳೆದುಕೊಂಡು ವೇಗವಾಗಿ ಸಾಗಿದೆ. ಪಿಕ್​ಅಪ್​ ಹಿಂದೆ ಬರುತ್ತಿದ್ದ ಚಾಲಕ ಸಿಗ್ನಲ್ ಮಾಡಿದರು ನಿಲ್ಲಿಸಿಲ್ಲ.

ಕೊನೆಗೂ, ಪಿಕ್​ಅಪ್ ವಾಹನ ಮುಂದೆ ಅಡ್ಡಲಾಗಿ ಮತ್ತೊಂದು ವಾಹನ ನಿಲ್ಲಿಸಿ ತಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪಿಕಅಪ್ ಟ್ರಕ್ ಅಡಿಯಿಂದ ಹೊರಗೆ ಎಳೆದು ಆಸ್ಪತ್ರೆಗೆ ಸಾಗಿಸಿದರು ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.ಈ ಮಧ್ಯೆ ಸ್ಥಳದಲ್ಲಿದ್ದವರು ಕೋಪಗೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯಗಳೆಲ್ಲ ಮೊಬೈಲ್‌ನಲ್ಲಿ ಸೆರೆಯಾಗಿದೆ. ಪಿಕ್‌ಅಪ್‌ ಚಾಲಕನ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net