ಭೀಕರ ರಸ್ತೆ ಅಪಘಾತ; ಅಪಘಾತವಾಗಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಕಾರು; ಪೊಲೀಸ್ ಸಿಬ್ಬಂದಿ ಸೇರಿ ಆರು ಮಂದಿ ಸಾವು | Accident
ಘಟನೆಯ ಸ್ಥಳ
Published on:
Copied
Follow Us
ಚೆನ್ನೈ: ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ವೆಲ್ಲಕೋವಿಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಅಪಘಾತವಾಗಿ ನಿಂತಿದ್ದ ಟ್ರಕ್ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೊಲೀಸ್ ಕಾನ್ಸ್ಟೇಬಲ್ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಬುಧವಾರ(ಮೇ 13) ವರದಿಯಾಗಿದೆ.
ಕೊಯಮತ್ತೂರು-ತಿರಿಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಇಂದು ಮುಂಜಾನೆ, ಕಡಲೂರಿನಿಂದ ವೆಲ್ಲಕೋವಿಲ್‌ಗೆ ಕ್ಯಾಸುವರಿನಾ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಟ್ರಕ್ ಚೆಕ್-ಪೋಸ್ಟ್ ಬಳಿಯ ಕೇಂದ್ರ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಈ ವೇಳೆ ವೆಳ್ಳಕೋವಿಲ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ರವಿಚಂದ್ರನ್ ಮತ್ತು ಟ್ರಕ್ ಚಾಲಕ ಸೆಂಥಿಲ್ ವಿಭಜಕವನ್ನು ದುರಸ್ತಿ ಮಾಡುವಾಗ, ಕೊಯಮತ್ತೂರು ಕಡೆ ತೆರಳುತ್ತಿದ್ದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದು ನಂತರ ಮುಂದೆ ನಿಲ್ಲಿಸಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಪೊಲೀಸ್ ಕಾನ್‌ಸ್ಟೆಬಲ್, ಟ್ರಕ್ ಚಾಲಕ ಹಾಗೂ ಕಾರಿನಲ್ಲಿದ್ದ ನಾಲ್ವರು ಸೇರಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಆಲಂಗುಲಂನ ಟ್ಯಾಕ್ಸಿ ಚಾಲಕ ರಾಮ್ (22), ನರಸಿಂಹನ್ (65), ಅವರ ಪತ್ನಿ ಶಾಂತಲಕ್ಷ್ಮಿ (60), ಮತ್ತು ಅವರ ಮಗ ಮೈಲಾಡುತುರೈನ ಬಾಲಾಜಿ (36) ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ವೆಲ್ಲಕೋವಿಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪ್ಪೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ (ಏಜೆನ್ಸೀಸ್).