12ರಂದು ಜನಪ್ರತಿನಿಧಿಗಳಿಗೆ ಸನ್ಮಾನ

Published on

ಹೊಳೆನರಸೀಪುರ: ತಾಲೂಕು ಕುರುಬರ ಸಂಘದಿಂದ ಜುಲೈ 12ರಂದು ಕನಕಭವನದಲ್ಲಿ ಸಂಸದ ಶ್ರೇಯಶ್ ಪಟೇಲ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಕೆ.ಆರ್.ನಗರ ಶಾಸಕ ರವಿಶಂಕರ್, ಕಡೂರು ಶಾಸಕ ಆನಂದ್ ಅವರನ್ನು ಸನ್ಮಾನಿಸಲಾಗುವುದು ಎಂದು ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಬಾಗೀವಾಳು ಮಂಜು ತಿಳಿಸಿದರು.


ತಾಲೂಕಿನಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಗಣ್ಯರಿಗೆ ವಿವರಿಸಿ ಅಗತ್ಯ ಸೌಲಭ್ಯ, ಸಹಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಅಹಿಂದ ಸಂಘಟನೆಯ ಮಲ್ಲಪ್ಪನಹಳ್ಳಿ ಮೋಹನ್ ಮಾತನಾಡಿ, ತಾಲೂಕಿನಲ್ಲಿ ಅಹಿಂದ ಸಂಘಟನೆಯನ್ನು ಒಗ್ಗೂಡಿಸಲು ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲ ಸಮುದಾಯಗಳನ್ನು ಜತೆಯಾಗಿ ತೆಗೆದುಕೊಂಡು ಹೋಗಲು ಅಗತ್ಯ ಮಾರ್ಗದರ್ಶನ ಪಡೆಯಲಾಗುವುದು. ಅಹಿಂದ ಸಂಘಟನೆಯ ಮೂಲಕ ದುರ್ಬಲ ವರ್ಗಗಳ ಪರವಾಗಿ ನಿಂತು ನ್ಯಾಯ ಒದಗಿಸಲು ಗಣ್ಯರ ಸಲಹೆ, ಸಹಕಾರ ಮಾರ್ಗದರ್ಶನ ಪಡೆದುಕೊಂಡು ಕಾರ್ಯೋನ್ಮುಖರಾಗುತ್ತೇವೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅಹಿಂದ ಸಂಘಟನೆಯಿಂದ ಯಾರಾದರೊಬ್ಬರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.


ಸುದ್ದಿಗೋಷ್ಠಿಯಲ್ಲಿ ಮುಖಂಡ ವನ್ನಿಕ್ಕೊಪ್ಪಲು ಮಂಜು, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಎಂ.ವಿ.ದಾಶರಥಿ, ವಕೀಲ ಎಚ್.ಕೆ.ಹರೀಶ್, ಹರದನಹಳ್ಳಿ ಪುಟ್ಟರಾಜು, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ರಾಜೇಗೌಡ, ಸಂಘಟನೆಯ ಹೇಮಂತ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net