ಹಣಕ್ಕಾಗಿ ಸರ್ಕಾರಿ ಜಾಬ್​ ಮಾರುವ ಗ್ಯಾಂಗ್​ಗಳಿಗೆ ಗೃಹ ಸಚಿವರಿಂದ ಖಡಕ್​ ಎಚ್ಚರಿಕೆ

Araga jnanendra
Published on

ಬೆಂಗಳೂರು: ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಿಂದ ಎಚ್ಚೆತ್ತಿರುವ ಸರ್ಕಾರ, ಹಣಕ್ಕಾಗಿ ಸರ್ಕಾರಿ ಜಾಬ್​ಗಳನ್ನು ಮಾರಾಟ ಮಾಡುವ ಗ್ಯಾಂಗನ್ನು ಹೊರಗೆ ತರುತ್ತೇವೆ ಎಂದು ಎಚ್ಚರಿಸಿದ್ದಾರೆ.

ಎಲ್ಲವೂ ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದೇವೆ ನಾನೇ ಸ್ವತಃ ಈ ಬಗ್ಗೆ ತೀರ್ಮಾನ ಮಾಡಿ, ಸಿಎಂ ಗಮನಕ್ಕೆ ತಂದಿದ್ದೇವೆ, ಹಣಕ್ಕೆ ಸರ್ಕಾರಿ ಜಾಬ್ ಗಳನ್ನು ಮಾರಾಟ ಮಾಡುವ ಗ್ಯಾಂಗ್‌ನ್ನು ಹೊರಗೆ ತಂದೇ ತರುತ್ತೇವೆ ಎಂದು ದಿವ್ಯ ಹಾಗರಗಿ ಬಂಧನದ ಕುರಿತು ಪ್ರತಿಕ್ರಿಯಿಸಿದ್ದಾರೆ.

ವಿಚಾರಣೆಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹಾಜರಾಗದ ಕುರಿತು ಮಾತನಾಡಿ, ಪ್ರಿಯಾಂಕಾ ಖರ್ಗೆ ಅನೇಕ ಆರೋಪ ಮಾಡಿದ್ದಾರೆ.ಸಿಐಡಿಯವರು ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಇವರು ತನಿಖೆಗೆ ಸಹಕಾರ ಕೊಡದೆ ಪಲಾಯನ ಮಾಡಿದ್ದಾರೆ ಎಂದರು.

ಅವರಿಗೆ ಕಾನೂನು ಗೊತ್ತಿಲ್ಲ. ಅವರು ದಾಖಲೆ ಕೊಡಬಹುದು.ಅವರ ತಂದೆ ಎಷ್ಟು ದೊಡ್ಡವರು.ಅವರಿಗೆ ತನಿಖೆ ಬಗ್ಗೆ ಗೊತ್ತಿಲ್ವಾ.ಅವರನ್ನು ಏನು ಅರೆಸ್ಟ್ ಮಾಡಲ್ಲ, ವಿಚಾರಣೆಯಷ್ಟೇ ಮಾಡೋದು, ಅವರ ಬಳಿ ಇರೋದೆ ದಾಖಲೆ ಕೊಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net