ಲ್ಯಾಂಡಿಂಗ್​ ಆಗುವ ವೇಳೆ ವಿಮಾನದ ಟೈರ್​ ಸ್ಫೋಟ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ

Thai Flight
Published on

ಬೆಂಗಳೂರು: ಲ್ಯಾಂಡಿಂಗ್​​ ಆಗುವ ಕೆಲವೇ ಹೊತ್ತಿನಲ್ಲಿ ವಿಮಾನದ ಟೈರ್​ ಸ್ಫೋಟಗೊಂಡಿತ್ತಾದರೂ ಪೈಲೆಟ್​ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಮುಂದಾಗಬಹುದಾದ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ.

150 ಪ್ರಯಾಣಿಕರನ್ನು ಹೊತ್ತ ಥಾಯಿ ವಿಮಾನ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ಕೆಲವೇ ಹೊತ್ತಿನಲ್ಲಿ ಇಳಿಯಬೇಕಿತ್ತು. ಆಗಲೇ ಭಾರೀ ಅನಾಹುತವೇ ನಡೆದುಹೋಗಿದೆ. ಟೈರು ಸ್ಫೋಟಗೊಂಡು ವಿಮಾನದಲ್ಲಿದ್ದವರು ಆತಂಕದಲ್ಲಿದ್ದರು. ಪೈಲೆಟ್​​ ಹೆದರದೇ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಏಪ್ರಿಲ್​ 26 ರಂದು ಈ ಘಟನೆ ನಡೆದಿದ್ದು, ತಾಂತ್ರಿಕ ತಂಡ ವಿಮಾನದ ಚಕ್ರವನ್ನು ಸರಿಪಡಿಸಿದ್ದು, ಏಪ್ರಿಲ್​​ 28ಕ್ಕೆ ಬೆಂಗಳೂರಿನಿಂದ ಬ್ಯಾಂಕಾಕ್​ಗೆ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೊಯಿಂಗ್​ 787-8 ವಿಮಾನ ಏಪ್ರಿಲ್​ 26ರಂದು ಬ್ಯಾಂಕಾಕ್​ನಿಂದ ಹೊರಟು ಬೆಂಗಳೂರಿಗೆ ರಾತ್ರಿ 11.32ಕ್ಕೆ ಲ್ಯಾಂಡ್​​ ಆಗಿದೆ. ಈ ಸಮಯದಲ್ಲಿ ವಿಮಾನದ ಟೈರ್​ ಸ್ಫೋಟಗೊಂಡ ಬಗ್ಗೆ ವಿಮಾನ ನಿಲ್ದಾಣದ ಕಂಟ್ರೋಲರ್​ ಅಧಿಕಾರಿಗಳಿಗೆ ಪೈಲೆಟ್​ ಮಾಹಿತಿ ರವಾನಿಸಿದ್ದಾರೆ. ಸದ್ಯ ಪವಾಡಸದೃಶರಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net