ಸಂಸತ್ತಿನಲ್ಲೇ ಅಶ್ಲೀಲ ವಿಡಿಯೋ ನೋಡಿದ ಬ್ರಿಟನ್​ ಸಚಿವ! ಬಹುತೇಕ ಸದಸ್ಯರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

UK
Published on

ಲಂಡನ್: ವ್ಯಕ್ತಿಯು ಯಾವುದೇ ದೊಡ್ಡ ಸ್ಥಾನಮಾನ ಹೊಂದಿದ್ದರೂ, ಆತನಿಗಿರುವ ಚಟದಿಂದ ಕೆಲವೇ ಕ್ಷಣಗಳಲ್ಲಿ ಆತನ ಮೇಲಿನ ಎಲ್ಲಾ ಗೌರವವನ್ನು ಕಳೆದುಕೊಳ್ಳುವಂತೆ ಮಾಡಿಕೊಳ್ಳುತ್ತಾನೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವೆಂಬಂತಾಗಿದೆ.

ಬ್ರಿಟನ್​ ಸಂಸತ್ತಿನಲ್ಲಿ ಸಚಿವರೊಬ್ಬರು ತಮ್ಮ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಮಹಿಳಾ ಅಭ್ಯರ್ಥಿ ಪಕ್ಕದಲ್ಲೇ ಕುಳಿತಿದ್ದರೂ ಲೆಕ್ಕಿಸದೇ ಅಶ್ಲೀಲ ವಿಡಿಯೋ ನೋಡಿದ ಸಚಿವನ ವಿರುದ್ಧ ತನಿಖೆಗೆ ಬ್ರಿಟನ್​​ ಗೌರ್ನಮೆಂಟ್​ ಕನ್ಸರ್ಟಿವ್​ ಪಕ್ಷ ತನಿಖೆಗೆ ಒತ್ತಾಯಿಸಿದೆ.

ತಿಂಗಳಿನಿಂದಲೇ ಈ ರೀತಿಯ ಅಶ್ಲೀಲ ವಿಡಿಯೋ ನೋಡುತ್ತಿದ್ದ ಸಚಿವ ಬುಧವಾರ ಮತ್ತೆ ತಮ್ಮ ಮೊಬೈಲ್​ ತೆಗೆದು ವಿಡಿಯೋ ನೋಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಪಕ್ಕದಲ್ಲೇ ಮಹಿಳಾ ಸದಸ್ಯರಿದ್ದರೂ ಲೆಕ್ಕಿಸದೇ ಅಶ್ಲೀಲ ವಿಡಿಯೋವನ್ನು ನೋಡುತ್ತಿದ್ದರು ಎಂದು ವಿದೇಶಿ ಪತ್ರಿಕೆ ವರದಿ ಮಾಡಿದೆ.

ಸದ್ಯ ಬ್ರಿಟನ್​ ಸಂಸತ್ತಿನಲ್ಲಿ ಅಶ್ಲೀಲ ವಿಡಿಯೋದ್ದೇ ಮಾತು. ಒಟ್ಟು ಲೈಂಗಿಕ ಪ್ರಕರಣದ ಆರೋಪ ಹೊತ್ತಿರುವ 56 ಸಂಸದರಲ್ಲಿ ಮೂವರು ಪ್ರಧಾನಿ ಬೊರೀಸ್​ ಜಾನ್ಸನ್​ನ ಸಂಪುಟ ಸಚಿರಾಗಿದ್ದಾರೆ. ಸದ್ಯ ಈ ಸದಸ್ಯರ ವಿರುದ್ಧ ತನಿಖೆಗೆ ಆದೇಶಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಬ್ರಿಟನ್​ ಗೌರ್ನಮೆಂಟ್​ ಕನ್ಸರ್ಟಿವ್​ ಪಕ್ಷದ ಮುಖ್ಯಸ್ಥ ಕ್ರಿಸ್​ ಹೀಟನ್​ ಹ್ಯಾರಿಸ್​ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಪ್ರಧಾನಿ, ನಿಜಕ್ಕೂ ಈ ರೀತಿ ಘಟನೆ ಆಗಬಾರದು. ಯಾವ ಸ್ಥಳ, ಹಾಗೂ ವ್ಯಕ್ತಿಯು ಘನತೆಯನ್ನು ಮೀರಬಾರದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net