ಅಚ್ಚರಿಯಾದರೂ ಸತ್ಯ: 79ನೇ ವಯಸ್ಸಿಗೆ ತಂದೆಯಾದ ನಟ!

robert d nero
Published on

ದೆಹಲಿ: ಸಿನಿಮಾದಲ್ಲಿ ಏನೆನೋ ವಿಚಿತ್ರಗಳು ನಡೆಯುತ್ತವೆ. ಅವೆಲ್ಲವೂ ಕಾಲ್ಪನಿಕ ಅಥವಾ ಗ್ರಾಫಿಕ್ ಎಂಬುದು ಜನರಿಗೆ ತಿಳಿದೇ ಇದೆ. ಆದರೆ ಈ ವಿಚಿತ್ರ ನಿಜವಾಗಿ ಬಿಟ್ಟರೇ? ಹೌದು, ಸಿನಿಮಾದ ನಟರೊಬ್ಬರು ತಮ್ಮ 79ನೇ ವಯಸ್ಸಿನಲ್ಲಿ ತಾನು ತಂದೆಯಾಗಿರುವುದಾಗಿ ಹೇಳಿದ್ದಾರೆ.

​ಹಾಲಿವುಡ್ ನಟ ರಾಬರ್ಡ್ ಡಿನೆರೋ ಅವರೇ ಈ ಸುದ್ದಿಯನ್ನು ಸ್ವತಃ ಅವರು ಬಹಿರಂಗಪಡಿಸಿದ್ದಾರೆ. ಕಳೆದ 60 ವರ್ಷಗಳಿಂದ ನಟನಾ ವೃತ್ತಿಯಲ್ಲಿರುವ ರಾಬರ್ಟ್ ಡಿನೆರೋ, ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಡಿನೆರೋ ಅವರ ಮುಂಬರುವ ಚಿತ್ರ 'ಅ ಬೌಟ್ ಮೈ ಫಾದರ್' ಸಿನಿಮಾದ ಪ್ರಚಾರದ ವೇಳೆ ಮಾತನಾಡಿರುವ ಅವರು, ಏಳನೇ ಮಗುವಿನ ವಿಚಾರವಾಗಿ ಮಾತನಾಡಿದ್ದಾರೆ.

ನಿಮಗೆ ಆರು ಮಕ್ಕಳು ಅಲ್ಲವೆ? ಎಂದು ಸಂದರ್ಶಕರು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಟ, "ಅಲ್ಲ, ಏಳು ಮಕ್ಕಳು. ನನಗೆ ಈಗಷ್ಟೇ ಮಗುವಿದೆ" ಎಂದು ಹೇಳಿದರು. ತಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಅಥವಾ ತಾಯಿಯ ಗುರುತಿನ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ಅವರು ಬಹಿರಂಗ ಪಡಿಸಿಲ್ಲ. ರಾಬರ್ಟ್ ಡಿನೆರೋ ಇಬ್ಬರು ಪತ್ನಿಯರಿಗೆ ವಿಚ್ಚೇದನ ನೀಡಿದ್ದು, ಮಾಡೆಲ್ ಜತೆ ಲಿವ್​ ಇನ್​​ ರಿಲೇಷನ್​ ಶೀಪ್​ನಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net